ರಿಂಗ್ ರೋಡ್ ನಲ್ಲಿರುವ ಕೆಲ ಮಹಾನ್ ನಾಯಕರ ಫ್ಲೆಕ್ಸ್ ಮೊದಲು ತೆಗೆಸಿ-ಪ್ರತಾಪ್ ಸಿಂಹ ಸೂಚನೆ.

ಮೈಸೂರು,ಫೆಬ್ರವರಿ,25,2022(www.justkannada.in):  ರಿಂಗ್ ರೋಡ್ ನಲ್ಲಿ ಕೆಲ ಮಹಾನ್ ನಾಯಕರು, ಬರ್ತ್ ಡೇ ಪಾರ್ಟಿಗಳ ಫ್ಲೆಕ್ಸ್ ಇದೆ. ಮೊದಲು ಅದನ್ನ ತೆಗೆಸಿ ಎಂದು ಅಧಿಕಾರಿಗಳಿಗೆ ಸಂಸದ ಪ್ರತಾಪ್ ಸಿಂಹ ಸೂಚನೆ ನೀಡಿದರು.

ಇಂದು ನಡೆದ ದಿಶಾ ಸಭೆಯಲ್ಲಿ ಅಧಿಕಾರಿಗಳಿಗೆ ಈ ಬಗ್ಗೆ ಸೂಚಿಸಿದ ಸಂಸದ ಪ್ರತಾಪ್ ಸಿಂಹ, ಕಳೆದ ಎರಡು ವರ್ಷದಿಂದ ಈ ಫ್ಲೆಕ್ಸ್ ಭರಾಟೆ ಹೆಚ್ಚಾಗಿದೆ. ಯಾರೇ ಆಗಿದ್ದರೂ ನೋಟೀಸ್ ನೀಡಿ. ನಮ್ಮ ಪಾರ್ಟಿಯವರದ್ದು ಆಗಿದ್ದರೂ ಮೊದಲು ಅವರಿಗೆ ನೋಟೀಸ್ ನೀಡಿ.

ಅಣ್ಣ ಬೇಜಾರ್ ಮಾಡ್ಕೊತಾನೆ ಅಂತ ಕೆಲವರು ಪೋಟೊ ಹಾಕಿರ್ತಾರೆ.  ದಯಮಾಡಿ ಆ ಅಣ್ಣನಿಗೆ ಮೊದಲು  ನೋಟೀಸ್ ನೀಡಿ. ನಿಮ್ಮ ಸಹಕಾರ ಬೇಕು  ಎಂದು ಜಿಲ್ಲಾಧಿಕಾರಿಗಳು. ಪಾಲಿಕೆ ಆಯುಕ್ತರಲ್ಲಿ ಸಂಸದ ಪ್ರತಾಪ್ ಸಿಂಹ ಮನವಿ ಮಾಡಿದರು.

Key words: Flex – Ring Road-mysore-Pratap simha.