ರಾಜ್ಯ ವಿಧಾನಪರಿಷತ್ ನ 25 ಸ್ಥಾನಗಳ ಚುನಾವಣೆ ದಿನಾಂಕ ಫಿಕ್ಸ್.

ಬೆಂಗಳೂರು,ನವೆಂಬರ್,9,2021(www.justkannada.in):  2022ಕ್ಕೆ ಮುಕ್ತಾಯಗೊಳ್ಳಲಿರುವ  ರಾಜ್ಯ ವಿಧಾನ ಪರಿಷತ್ ನ  25 ಸ್ಥಾನಗಳಿಗೆ ಚುನಾವಣಾ ದಿನಾಂಕ ಪ್ರಕಟವಾಗಿದ್ದು,  ಡಿಸೆಂಬರ್ 10 ರಂದು ಮತದಾನ ನಡೆಯಲಿದೆ.

ಚುನಾವಣಾ ಆಯೋಗ ದಿನಾಂಕ ನಿಗದಿ ಪಡಿಸಿದ್ದು,  ಡಿಸೆಂಬರ್ 10ರಂದು ವಿಧಾನಪರಿಷತ್ ನ 25 ಸ್ಥಾನಗಳಿಗೆ ಚುನಾವಣೆ ನಡೆಯಲಿದೆ. ಅಂದು ಬೆಳಿಗ್ಗೆ 8 ರಿಂದ ಸಂಜೆ 4 ಗಂಟೆಯವರೆಗೆ  ಮತದಾನ ನಡೆಯಲಿದ್ದು ಡಿಸೆಂಬರ್ 14 ರಂದು ಫಲಿತಾಂಶ ಪ್ರಕಟವಾಗಲಿದೆ.

ನವೆಂಬರ್ 16 ರಂದು ಚುನಾವಣೆ ಅಧಿಸೂಚನೆ ಪ್ರಕಟವಾಗಲಿದ್ದು,  ನವೆಂಬರ್ 23 ನಾಮಪತ್ರ ಸಲ್ಲಿಕೆಗೆ ಕೊನೇ ದಿನವಾಗಿದೆ. ನವೆಂಬರ್ 24ರಂದು ನಾಮಪತ್ರಗಳ ಪರಿಶೀಲನೆ ನಡೆಯಲಿದೆ.  ರಾಜ್ಯದ ವಿಧಾನಪರಿಷತ್  ವಿವಿಧ ಕ್ಷೇತ್ರಗಳಿಂದ ಆಯ್ಕೆಯಾಗಿದ್ದ  25 ಸದಸ್ಯರ ಕಾಲಾವಧಿ 2022ಕ್ಕೆ ಮುಕ್ತಾಯಗೊಳ್ಳಲಿದೆ. ಈ ಸ್ಥಾನಗಳಿಗೆ ತಮ್ಮದೇ ಪಕ್ಷದ ಅಭ್ಯರ್ಥಿಗಳನ್ನ ಗೆಲ್ಲಿಸಿ ಪರಿಷತ್ ನಲ್ಲಿ ತಮ್ಮ ಬಲ ಹೆಚ್ಚಿಸಿಕೊಳ್ಳಲು ಮೂರು ಪಕ್ಷಗಳು ಸಜ್ಜಾಗಿವೆ.

Key words: Fix- election date –25 seats –karnataka –legislative council