ಪಂಚ ರಾಜ್ಯಗಳ ಚುನಾವಣೆ: ಭರದಿಂದ ಸಾಗಿದೆ ಮತ ಎಣಿಕೆ ಕಾರ್ಯ

ಬೆಂಗಳೂರು, ಡಿಸೆಂಬರ್ 03, 2023 (www.justkannada.in): ಪಂಚರಾಜ್ಯಗಳ ಚುನಾವಣೆಯ ಮತ ಏಣಿಕೆ ಇಂದು ಬೆಳಗ್ಗೆಯಿಂದ ಪ್ರಾರಂಭವಾಗಿದ್ದು, ಸಾಕಷ್ಟು ಕುತೂಹಲ ಮೂಡಿಸಿದೆ.

ಮೊದಲಿಗೆ ಅಂಚೆ ಮತ ಏಣಿಕೆ ನಡೆದಿದ್ದು, ಇವಿಎಂ ಮಿಶಿನ್‌ ಮತ ಏಣಿಕೆಯೂ ಭರದಿಂದ ಸಾಗಿದೆ.

ತೆಲಂಗಾಣದ 119 ಕ್ಷೇತ್ರ, ಮಧ್ಯಪ್ರದೇಶದ 230 ಕ್ಷೇತ್ರ, ರಾಜಸ್ಥಾನದ 199 ಕ್ಷೇತ್ರ, ಛತ್ತೀಸ್ಗಡದ 90 ಕ್ಷೇತ್ರಗಳ ಮತ ಏಣಿಕೆ ಕಾರ್ಯವನ್ನು ಅಧಿಕಾರಿಗಳು ನಡೆಸುತ್ತಿದ್ದಾರೆ.

ಅಂಜೆ ಮತ ಏಣಿಕೆ ಪ್ರಾರಂಭದಲ್ಲಿ ರಾಜಸ್ಥಾನ ಕಾಂಗ್ರೆಸ್‌ ಪಕ್ಷ ಮುನ್ನಡೆ ಪಡೆದಿದ್ದರೆ, ತೆಲಂಗಾಣದಲ್ಲಿ ಬಿಜೆಪಿ ಮುನ್ನಡೆ ಸಾಧಿಸಿದೆ.