ಶ್ರೀರಂಗಪಟ್ಟಣ ತಾಲೂಕಿನ ಕೆ.ಆರ್.ಎಸ್’ನಲ್ಲಿ ಒಂದೇ ಕುಟುಂಬದ ಐವರ ಬರ್ಬರ ಹತ್ಯೆ

ಮಂಡ್ಯ, ಫೆಬ್ರವರಿ 06,2022 (www.justkannada.in): ಶ್ರೀರಂಗಪಟ್ಟಣ ತಾಲೂಕಿನ ಕೆ.ಆರ್.ಎಸ್. ಗ್ರಾಮದಲ್ಲಿ ಒಂದೇ ಕುಟುಂಬದವರನ್ನು ಕೊಲೆ ಮಾಡಲಾಗಿದೆ.

ಮಾರಕಾಸ್ತ್ರದಿಂದ ಕೊಚ್ಚಿ ನಾಲ್ವರು ಮಕ್ಕಳು ಮತ್ತು ಮಹಿಳೆಯನ್ನು ಹತ್ಯೆ ಮಾಡಲಾಗಿದೆ. ಮಂಡ್ಯ ಜಿಲ್ಲೆ ಶ್ರೀರಂಗಪಟ್ಟಣ ತಾಲೂಕಿನ ಕೆ.ಆರ್.ಎಸ್. ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ಗ್ರಾಮಸ್ಥರನ್ನು ಬೆಚ್ಚಿ ಬೀಳಿಸಿದೆ.

26 ವರ್ಷದ ಲಕ್ಷ್ಮಿ, 12 ವರ್ಷದ ರಾಜ್ ಮತ್ತು 7 ವರ್ಷದ ಕೋಮಲ್, 4 ವರ್ಷದ ಕುನಾಲ್, 8 ವರ್ಷದ ಗೋವಿಂದ್ ಅವರನ್ನು ದುಷ್ಕರ್ಮಿಗಳು ಕೊಚ್ಚಿ ಕೊಲೆ ಮಾಡಿದ್ದಾರೆ.

ಘಟನೆಗೆ ನಿಖರ ಕಾರಣ ತಿಳಿದುಬಂದಿಲ್ಲ. ಸ್ಥಳಕ್ಕೆ ಭೇಟಿ ನೀಡಿರುವ ಪೊಲೀಸರು ತನಿಖೆ ಮುಂದುವರಿಸಿದ್ದಾರೆ. ಭೀಕರ ಕೃತ್ಯಕ್ಕೆ ಕೆಆರ್‌ಎಸ್ ಗ್ರಾಮ ಬೆಚ್ಚಿಬಿದ್ದಿದೆ.