ರಾಜ್ಯದಲ್ಲಿ ಮೊದಲ ಝೀಕಾ ವೈರಸ್ ದೃಢ.

ರಾಯಚೂರು,ಡಿಸೆಂಬರ್,12,2022(www.justkannada.in):  ರಾಜ್ಯದಲ್ಲಿ ಮೊದಲ ಝೀಕಾ ವೈರಸ್ ದೃಢಪಟ್ಟಿದೆ.

ರಾಯಚೂರು ಜಿಲ್ಲೆ ಮಾನ್ವಿ ತಾಲ್ಲೂಕಿನ  5 ವರ್ಷದ ಬಾಲಕಿಗೆ ಝೀಕಾ ವೈರಸ್ ಸೋಂಕು ತಗುಲಿದೆ ಎಂಬ ಮಾಹಿತಿ ಲಭ್ಯವಾಗಿದೆ. ಕಳೆದ 15 ದಿನಗಳಿಂದ ಬಾಲಕಿ ಜ್ವರ ವಾಂತಿ, ಭೇದಿಯಿಂದ ಬಳಲುತ್ತಿದ್ದಳು.  ಬಾಲಕಿಯನ್ನ ಮೊದಲು ಸಿಂಧನೂರು ತಾಲ್ಲೂಕು ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಬಳಿಕ  ಡೇಂಘಿ ಜ್ವರ ಹಿನ್ನೆಲೆ ವಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು.

ಈ ಕುರಿತು ಮಾತನಾಡಿರುವ ಆರೋಗ್ಯ ಸಚಿವ ಡಾ.ಕೆ.ಸುಧಾಕರ್, ರಾಯಚೂರಿನ ಬಾಲಕಿಗೆ ಝೀಕಾ ವೈರಸ್ ಬಗ್ಗೆ ಲ್ಯಾಬ್ ನಿಂದ ಮಾಹಿತಿ ಬಂದಿದೆ. ಮೂರು ಸ್ಯಾಂಪಲ್ಸ್ ಅನ್ನು ಲ್ಯಾಬ್ ಗೆ ಕಳುಹಿಸಲಾಗಿತ್ತು. ಈಗ ಒಬ್ಬರಲ್ಲಿ ಝೀಕಾ ವೈರಸ್ ಪತ್ತೆಯಾಗಿದೆ.  ಝೀಕಾ ವೈರಸ್ ತಡೆಗೆ ಪ್ರತ್ಯೇಕ ಗೈಡ್ ಲೈನ್ಸ್  ಹೊರಡಿಸಲಾಗುತ್ತದೆ. ಬಾಲಕಿ ಮೇಲೆ ನಿಗಾ ಇಡುತ್ತೇವೆ ಎಂದು ತಿಳಿಸಿದರು.

Key words: First -Zika -virus -confirmed – state.