ಇಸ್ರೋದಿಂದ ವರ್ಷದ ಮೊದಲ ಯಶಸ್ವಿ ಉಡಾವಣೆ: 3 ಉಪಗ್ರಹಗಳನ್ನು ಹೊತ್ತು ಸಾಗಿದ PSLV-C52

ಬೆಂಗಳೂರು, ಫೆಬ್ರವರಿ 14, 2022 (www.justkannada.in):  ಭಾರತೀಯ ಬಾಹ್ಯಾಕಾಶ ಮತ್ತು ಸಂಶೋಧನಾ ಸಂಸ್ಥೆ ಇಂದು ಮುಂಜಾನೆ ಯಶಸ್ವಿಯಾಗಿ 2022ರ ಮೊದಲ ಉಡಾವಣೆ ಮಾಡಿದೆ.

3 ಉಪಗ್ರಹಗಳನ್ನು ಹೊತ್ತ PSLV-C52 ರಾಕೆಟ್ ಉಪಗ್ರಹಗಳನ್ನು ಕಕ್ಷೆಗೆ ಸೇರಿಸಿದೆ.  ಆಂಧ್ರ ಪ್ರದೇಶದ ಶ್ರೀಹರಿಕೋಟಾದ ಎಸ್‌ಎಆರ್ ನಿಂದ ಬೆಳಿಗ್ಗೆ5.59 ಕ್ಕೆ ಉಡಾವಣೆ ನಡೆಸಲಾಯಿತು.

ನಾಲ್ಕು ಹಂತದ ರಾಕೆಟ್ ವಿದ್ಯಾರ್ಥಿ ಉಪಗ್ರಹ ಇನ್ ಸ್ಪೈರ್ ಸ್ಯಾಟ್ ಮತ್ತು ಇನ್ ಸ್ಯಾಟ್-2ಡಿಟಿ ಎಂದು ಕರೆಯಲ್ಪಡುವ ಬಾಹ್ಯಾಕಾಶ ನೌಕೆಯೊಂದಿಗೆ ಮೇಲಕ್ಕೆತ್ತಲ್ಪಟ್ಟಿತು.

ಇದು ಭವಿಷ್ಯದಲ್ಲಿ ಭಾರತ-ಭೂತಾನ್ ಜಂಟಿ ಕಾರ್ಯಾಚರಣೆಯ ಪೂರ್ವಗಾಮಿಯಾಗಿದೆ ಎಂದು ಹೇಳಲಾಗಿದೆ.

PSLV-C52 ರಾಕೆಟ್ (ಪೋಲಾರ್ ಉಪಗ್ರಹ ಉಡಾವಣಾ ವಾಹನ)ನಲ್ಲಿ ಭೂ ವೀಕ್ಷಣಾ ಉಪಗ್ರಹವನ್ನು ಯಶಸ್ವಿಯಾಗಿ ಉಡಾವಣೆ ಮಾಡಲಾಯಿತು.