Monday, September 21, 2026

BDA Apartments

ಪಟಾಕಿ ಅವಘಡ ಹಿನ್ನೆಲೆ: ಸಾರ್ವಜನಿಕರು ನಮಗೆ ಸಹಕರಿಸಿ –ಗೃಹ ಸಚಿವ ಪರಮೇಶ್ವರ್...
Home Front Page ಪಟಾಕಿ ಅವಘಡ ಹಿನ್ನೆಲೆ: ಸಾರ್ವಜನಿಕರು ನಮಗೆ ಸಹಕರಿಸಿ –ಗೃಹ ಸಚಿವ ಪರಮೇಶ್ವರ್ ಮನವಿ.

ಪಟಾಕಿ ಅವಘಡ ಹಿನ್ನೆಲೆ: ಸಾರ್ವಜನಿಕರು ನಮಗೆ ಸಹಕರಿಸಿ –ಗೃಹ ಸಚಿವ ಪರಮೇಶ್ವರ್ ಮನವಿ.

ಬೆಂಗಳೂರು,ನವೆಂಬರ್,13,2023(www.justkannada.in): ಬೆಂಗಳೂರಿನಲ್ಲಿ ನಿನ್ನೆ ಒಂದೇ ದಿನ ಪಟಾಕಿ ಸಿಡಿಸುವ ವೇಳೆ 26 ಮಂದಿ ಗಾಯಗೊಂಡಿದ್ದು ಈ ಹಿನ್ನೆಲೆಯಲ್ಲಿ ಗ್ರೀನ್ ಪಟಾಕಿ ಮಾತ್ರ ಉಪಯೋಗಿಸಿ ಸಾರ್ವಜನಿಕರು ನಮಗೆ ಸಹಕರಿಸಬೇಕು ಎಂದು ಗೃಹಸಚಿವ ಡಾ.ಜಿ.ಪರಮೇಶ್ವರ್ ಮನವಿ ಮಾಡಿದ್ದಾರೆ.

ದೀಪಾವಳಿ ಹಬ್ಬ ಹಿನ್ನೆಲೆ ಪಟಾಕಿ ಅವಘಡ ಕೇಸ್​ ಹೆಚ್ಚಳ ವಿಚಾರ  ಕುರಿತು ಮಾತನಾಡಿದ ಗೃಹ ಸಚಿವ ಡಾ.ಪರಮೇಶ್ವರ್, ಗ್ರೀನ್ ಪಟಾಕಿ ಉಪಯೋಗಿಸಬೇಕು ಎಂದು ಸೂಚನೆ ನೀಡಿದ್ದೇವೆ. ಜನರೂ ಕೂಡ ನಮಗೆ ಸಹಕಾರ ನೀಡಬೇಕು. ಕೆಲವೆಡೆ ಪಟಾಕಿಯಿಂದ ಕಣ್ಣಿಗೆ ಗಾಯವಾಗಿರುವ ವರದಿ ಆಗಿದೆ. ಎಸಿಪಿಗಳ ಒಂದು ಟೀಂನಿಂದ ಎಲ್ಲಾ ಏರಿಯಾಗಳಲ್ಲಿ ಪರಿಶೀಲನೆ ನಡೆಯುತ್ತಿದೆ  ಎಂದರು.ಪಟಾಕಿ ಅವಘಡ ಹಿನ್ನೆಲೆ parameshwar

Key words: firecracker- incident- Public-cooperate -Minister -Parameshwar