Tuesday, November 3, 2026

Dasara Wishes

Happy Dasara
Home Crime ಕೆಎಸ್ ಆರ್ ಟಿಸಿ ಬಸ್ ನಲ್ಲಿ ಅಗ್ನಿ ಅವಘಡ

ಕೆಎಸ್ ಆರ್ ಟಿಸಿ ಬಸ್ ನಲ್ಲಿ ಅಗ್ನಿ ಅವಘಡ

ಕೆಎಸ್ ಆರ್ ಟಿಸಿ ಬಸ್ ನಲ್ಲಿ ಅಗ್ನಿ ಅವಘಡ puli

ಮೈಸೂರು,ಡಿಸೆಂಬರ್,3,2024 (www.justkannada.in):  ಏಕಾಏಕಿ ಕೆಎಸ್ಆರ್ ಟಿಸಿ ಬಸ್ ನಲ್ಲಿ  ಬೆಂಕಿ ಕಾಣಿಸಿಕೊಂಡ ಘಟನೆ ಮೈಸೂರು ಜಿಲ್ಲೆ ಹೆಚ್.ಡಿ.ಕೋಟೆ ತಾಲೂಕಿನಲ್ಲಿ ನಡೆದಿದೆ.

ದೇವಲಾಪುರ-ಜಕ್ಕಹಳ್ಳಿ ಮಾರ್ಗ ಮಧ್ಯೆ ಈ ಘಟನೆ ನಡೆದಿದ್ದು, ಐವತ್ತಕ್ಕೂ ಹೆಚ್ಚು ಮಂದಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಅವಘಡದಿಂದ ಭಾರಿ ಅನಾಹುತ ತಪ್ಪಿದೆ.

ಹೆಚ್.ಡಿ.ಕೋಟೆ ಘಟಕಕ್ಕೆ ಸೇರಿದ  ಕೆಎಸ್ ಆರ್ ಟಿಸಿ ಬಸ್ ನಡಾಡಿ ಗ್ರಾಮದಿಂದ ಹೆಚ್.ಡಿ.ಕೋಟೆಗೆ ತೆರಳುತ್ತಿತ್ತು. ಈ ವೇಳೆ ದೇವಲಾಪುರ-ಜಕ್ಕಹಳ್ಳಿ ಮಾರ್ಗ ಮಧ್ಯೆ ಏಕಾಏಕಿ ಬೆಂಕಿ ಕಾಣಿಸಿಕೊಂಡಿದೆ. ದಿಢೀರ್ ದೌಡಾಯಿಸಿದ  ಅಗ್ನಿಶಾಮಕದಳ ಸಿಬ್ಬಂದಿ ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ.

Key words: Fire, KSRTC bus, mysore