Wednesday, October 7, 2026

BDA Apartments

immense respect BDA JK_Adv BDA Adv
Home Crime ಕರಗ ಮಹೋತ್ಸವದ ವೇಳೆ ಬೆಂಕಿ ಅನಾಹುತ: ಹೊತ್ತಿ ಉರಿದ 10 ಬೈಕ್ ಗಳು.

ಕರಗ ಮಹೋತ್ಸವದ ವೇಳೆ ಬೆಂಕಿ ಅನಾಹುತ: ಹೊತ್ತಿ ಉರಿದ 10 ಬೈಕ್ ಗಳು.

ಬೆಂಗಳೂರು,ಏಪ್ರಿಲ್,6,2023(www.justkannada.in):  ಕರಗ ಮಹೋತ್ಸವದ ವೇಳೆ ದೇವಸ್ಥಾನದ ಮುಂದೆ ಹಚ್ಚಲಾಗಿದ್ದ ಕರ್ಪೂರದ ಬೆಂಕಿ ತಗುಲಿ ದ್ವಿಚಕ್ರವಾಹನಗಳು ಬೆಂಕಿಗಾಹುತಿಯಾಗಿರುವ ಘಟನೆ ನಡೆದಿದೆ.

ದೇವಸ್ಥಾನದ ಮುಂದೆ ಕರ್ಪೂರ ಹಚ್ಚಲಾಗಿತ್ತು. ಈ ವೇಳೆ ಕರ್ಪೂರದ ಬೆಂಕಿ ತಗುಲಿ ದೇವಸ್ಥಾನದ ಮುಂದೆ ನಿಲ್ಲಿಸಿದ  10 ಬೈಕ್ ಗಳು ಹೊತ್ತಿ ಉರಿದಿವೆ. . ವಾಹನಗಳನ್ನು ತೆರವುಗೊಳಿಸುವಂತೆ ಮೈಕ್ ನಲ್ಲಿ ಅನೌನ್ಸ್ ಮಾಡಿದರೂ ಭಕ್ತರು ವಾಹನಗಳನ್ನು ತೆರವುಗೊಳಿಸಿಲ್ಲ. ಇದರಿಂದಾಗಿ ಬೆಂಕಿ ಸುತ್ತಮುತ್ತಲೂ ವ್ಯಾಪಿಸಿದೆ ಎನ್ನಲಾಗಿದೆ.ಕರಗ ಮಹೋತ್ಸವದ ವೇಳೆ ಬೆಂಕಿ ಅನಾಹುತ: ಹೊತ್ತಿ ಉರಿದ 10 ಬೈಕ್ ಗಳು fire

ದೇವಸ್ಥಾನದ ಮುಂದೆ ನಿಲ್ಲಿಸಿದ್ದ 10ಕ್ಕೂ ಹೆಚ್ಚು ದ್ವಿಚಕ್ರವಾಹನಗಳು ಸುಟ್ಟು ಕರಕಲಾಗಿವೆ ಎಂದು ತಿಳಿದುಬಂದಿದೆ. ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕಾಗಮಿಸಿ ಬೆಂಕಿ ನಂದಿಸಿದ್ದಾರೆ ಎನ್ನಲಾಗಿದೆ.

Key words: Fire – Karaga Mahotsava-10 bikes- burnt.