ಕೊಡಗು,ಅಕ್ಟೋಬರ್,9,2025 (www.justkannada.in): ವಸತಿ ಶಾಲೆಯಲ್ಲಿ ಅಗ್ನಿ ಅವಘಡ ಸಂಭವಿಸಿ ವಿದ್ಯಾರ್ಥಿ ಸಜೀವ ದಹನವಾಗಿರುವ ಘಟನೆ ಕೊಡಗು ಜಿಲ್ಲೆ ಮಡಿಕೇರಿ ತಾಲ್ಲೂಕಿನ ಕಾಟಕೇರಿಯಲ್ಲಿ ನಡೆದಿದೆ.
ಹರಿಮಂದಿರ ವಸತಿ ಶಾಲೆಯಲ್ಲಿ ಈ ಘಟನೆ ನಡೆದಿದ್ದು ಪುಷ್ಪಕ್ ಮೃತಪಟ್ಟ ವಿದ್ಯಾರ್ಥಿ . ಪುಷ್ಪಕ್ 2ನೇ ತರಗತಿ ವ್ಯಾಸಂಗ ಮಾಡುತ್ತಿದ್ದ. ಬಾಗ ಮಂಡಲ ಸಮೀಪದ ಚೆಟ್ಟಿಮಾನಿ ಗ್ರಾಮದವನಾದ ವಿದ್ಯಾರ್ಥಿ ಪುಷ್ಪಕ್ ಕಾಟಕೇರಿಯ ಹರಿಮಂದಿರ ವಸತಿಶಾಲೆಯಲ್ಲಿ ವ್ಯಾಸಂಗ ಮಾಡುತ್ತಿದ್ದನು.
ಶಾರ್ಟ್ ಸರ್ಕ್ಯೂಟ್ ನಿಂದ ಅಗ್ನಿ ಅವಘಡ ಸಂಭವಿಸಿದೆ ಎಂಬ ಶಂಕೆ ವ್ಯಕ್ತವಾಗಿದ್ದು ವಸತಿ ಶಾಲೆಯಲ್ಲಿದ್ದ51 ಮಕ್ಕಳನ್ನು ಸ್ಥಳೀಯರು ರಕ್ಷಿಸಿದ್ದಾರೆ.
Key words: Fire accident, residential school, Student, death







