ಕೆ.ಆರ್.ನಗರ: ದೇವರ ಮುಂದೆ ಹಚ್ಚಿಟ್ಟ ದೀಪ ‘ಗಂಗೆ’ಯ ಜೀವ ತೆಗೆಯಿತು….!

ಮೈಸೂರು, ಆಗಸ್ಟ್ 05, 2019 (www.justkannada.in): ದೇವರ ಮನೆಯಲ್ಲಿ ಹಚ್ಚಿದ ದೀಪದಿಂದ ಮನೆ ಬೆಂಕಿಗಾಹುತಿಯಾಗಿದ್ದು, ವಿಶೇಷಚೇತನೆ ಯುವತಿಯೂ ಜೀವ ಕಳೆದುಕೊಂಡಿದ್ದಾಳೆ.

ಕೆ.ಆರ್.ನಗರದಲ್ಲಿ ಈ ಘಟನೆ‌ ನಡೆದಿದ್ದು, ಅಂಗವಿಕಲೆ ಗಂಗೆ(22) ಜೀವ ಕಳೆದುಕೊಂಡಿದ್ದಾರೆ. ಇವರ ತಾಯಿ ಜಯಲಕ್ಷ್ಮಮ್ಮ ಅವರಿಗೂ ಸುಟ್ಟ ಗಾಯ, ಆಸ್ಪತ್ರೆಗೆ ದಾಖಲಾಗಿದ್ದಾರೆ/

ಜಯಲಕ್ಷ್ಮಮ್ಮ ಅವರು ಎಂದಿನಂತೆ ದೇವರ ಫೋಟೋ ಬಳಿ ದೀಪ ಹಚ್ಚಿದ್ದರು. ಇದು ಆಕಸ್ಮಿಕವಾಗಿ ಮನೆಗೂ ಹೊತ್ತಿಕೊಂಡಿದೆ. ಹೊಗೆ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಸ್ಥಳೀಯರು ಕೂಗಿಕೊಂಡಿದ್ದಾರೆ.

ತಕ್ಷಣ ನೆರವಿಗೆ ಬಂದರೂ ಮನೆಯೊಳಗೆ ಬೆಂಕಿಜ್ವಾಲೆ ಆವರಿಸಿದ್ದರಿಂದ ಗಂಗೆ ಮೃತಪಟ್ಟಿದ್ದಾರೆ. ಮಗಳನ್ನು ರಕ್ಷಿಸಲು ಹೋಗಿ ತಾಯಿ ಗಾಯಗೊಂಡಿದ್ದಾರೆ. ಸ್ಥಳಕ್ಕೆ ಅಗ್ನಿಶಾಮಕ ದಳದ ಸಿಬ್ಬಂದಿ ಆಗಮಿಸಿ ಬೆಂಕಿ ನಂದಿಸಿದ್ದಾರೆ.