ಬೆಂಗಳೂರು,ಅಕ್ಟೋಬರ್,14,2025 (www.justkannada.in): ಸೈಟ್ ಕೊಡಿಸೋದಾಗಿ ಹೇಳಿ ಕಿರುತೆರೆ ನಟ, ನಟಿಯರು ಸೇರಿ 139 ಜನರಿಗೆ ವಂಚನೆ ಮಾಡಿದ ಆರೋಪದ ಮೇಲೆ ಬಿಲ್ಡರ್ ಸೇರಿ ಐವರ ವಿರುದ್ಧ ರಾಜರಾಜೇಶ್ವರಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬಿಲ್ಡರ್ ಭಗೀರಥ ಸೇರಿದಂತೆ ಐದು ಜನರ ವಿರುದ್ಧ ಆರ್ ಆರ್ ನಗರ ಪೊಲೀಸ್ ಠಾಣೆಯಲ್ಲಿ ಎಫ್ ಐಆರ್ ದಾಖಲಾಗಿದೆ. ಕರ್ನಾಟಕ ಟೆಲಿವಿಷನ್ ಅಸೋಸಿಯೇಷನ್ ಸದಸ್ಯರಿಗೆ ಬಿಲ್ಡರ್ ಭಗೀರಥ ಸೇರಿದಂತೆ ಐವರು ಆರೋಪಿಗಳು ಹಣ ಪಡೆದು ಸೈಟ್ ಕೊಡಿಸುವುದಾಗಿ ವಂಚನೆ ಎಸಗಿದ್ದಾರೆ ಎನ್ನಲಾಗಿದೆ.
ಸುಮಾರು 139 ಕಿರುತೆರೆ ನಟ, ನಟಿಯರಿಗೆ ವಂಚನೆ ಎಸಗಿರುವ ಆರೋಪ ಕೇಳಿ ಬಂದಿದ್ದು, ಈ ಬಗ್ಗೆ ಅಸೋಸಿಯೇಷನ್ ವತಿಯಿಂದ ದೂರು ನೀಡಲಾಗಿದ್ದು. ಇದೀಗ ಬಿಲ್ಡರ್ ಭಗೀರಥ ಸೇರಿ ಐವರ ವಿರುದ್ದ ಎಫ್‌ಐಆರ್ ದಾಖಲಾಗಿದೆ.
Key words: FIR, registered, cheating, actors, actresses, sites