ಬಿಬಿಎಂಪಿಯ 57 ಗುತ್ತಿಗೆದಾರರ ವಿರುದ್ಧ ಎಫ್ ಐಆರ್ ದಾಖಲು.

ಬೆಂಗಳೂರು,ಆಗಸ್ಟ್,17,2023(www.justkannada.in):  ಬಾಕಿ ಬಿಲ್ ಕ್ಲಿಯರ್ ಮಾಡುವಂತೆ ಒತ್ತಡ, ಆತ್ಮಹತ್ಯೆ ಬೆದರಿಕೆ ಹಾಕಿದ ಆರೋಪದ ಮೇಲೆ ಬಿಬಿಎಂಪಿಯ 57 ಗುತ್ತಿಗೆದಾರರ ವಿರುದ್ದ ಹೈಗ್ರೌಂಡ್ಸ್ ಪೊಲೀಸ್ ಠಾಣೆಯಲ್ಲಿ ಎಫ್ ಐಆರ್ ದಾಖಲಾಗಿದೆ.

ಮೂರು ವರ್ಷದ ಬಾಕಿ ಬಿಲ್  ಕ್ಲಿಯರ್  ಮಾಡಲು ಬಿಬಿಎಂಪಿ ಅಧಿಕಾರಿಗೆ ಗುತ್ತಿಗೆದಾರರು ಒತ್ತಡ ಹಾಕುತ್ತಿದ್ದರು.  ಈ ಸಂಬಂಧ ಬಿಬಿಎಂಪಿ ಅಧಿಕಾರಿ ಮಹದೇವ್ ಹೈಗ್ರೌಂಡ್ಸ್ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಬಿಲ್ ಕ್ಲಿಯರ್ ಮಾಡದಿದ್ದರೇ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಬೆದರಿಕೆ ಹಾಕಿದ್ದಾರೆ ಎಂದು ದೂರಿನಲ್ಲಿ ಆರೋಪಿಸಿದ್ದಾರೆ. ಈ ಸಂಬಂಧ ಮಂಜುನಾಥ್ ಸೇರಿ 57 ಗುತ್ತಿಗೆದಾರರ ವಿರುದ್ದ ಎಫ್ ಐಆರ್ ದಾಖಲಾಗಿದೆ.

ಇನ್ನು 22 ಮಂದಿ ಗುತ್ತಿಗೆದಾರರನ್ನ ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ ಎನ್ನಲಾಗಿದೆ.

Key words: FIR- filed –against- 57 contractors – BBMP.