ಬೆಂಗಳೂರು,ಜನವರಿ,8,2026 (www.justkannada.in): ಹೈಕೋರ್ಟ್ ನಲ್ಲಿ ಕೆಲಸ ಕೊಡಿಸುವುದಾಗಿ ನಂಬಿಸಿ ಲಕ್ಷಾಂತರ ರೂ. ವಂಚನೆ ಮಾಡಿದ 7 ಮಂದಿಯ ವಿರುದ್ದ ಪ್ರಕರಣ ದಾಖಲಾಗಿದೆ.
ವಂಚನೆ ಮಾಡಿದ ಸುದರ್ಶನ್, ಲವೀನಾ ಜೆನೆಟ್, ಮಹೇಂದ್ರ, ಜೈಸನ್ ಡಿಸೋಜಾ ಸೇರಿದಂತೆ ಏಳು ಜನರ ವಿರುದ್ಧ ಇದೀಗ ದೂರು ದಾಖಲಾಗಿದೆ. ಸುಮಿತ್, ಶಿವಕುಮಾರ್, ಮಹಿಮಾ, ಹರ್ಷ ಮತ್ತು ಹರ್ಷಿತಾ ಎಂಬುವವರು ವಂಚನೆಗೊಳಗಾದವರು. ಹೈಕೋರ್ಟ್ ನಲ್ಲಿ ಕೆಲಸ ಕೊಡಿಸುವುದಾಗಿ ನಂಬಿಸಿ ಐವರಿಂದ 54 ಲಕ್ಷ ಪಡೆದು ವಂಚಿಸಿದ್ದರು.
2013 ರಲ್ಲಿ ಹೈಕೋರ್ಟ್ ಅಲ್ಲಿ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿತ್ತು. ಎಫ್ ಡಿ ಎ, ಎಸ್ ಡಿ ಎ ಹಾಗೂ ಜಾರಿಕಾರ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದ್ದರು. ಈ ವೇಳೆ ಕಾಯಂ ಕೆಲಸ ಕೊಡಿಸುವುದಾಗಿ ಹಣ ಪಡೆದು ವಂಚನೆ ಎಸಗಲಾಗಿದೆ. ಹೈಕೋರ್ಟ್ ರಿಜಿಸ್ಟರ್ ಜನರಲ್ ದಾಖಲೆ ನಕಲು ಮಾಡಿ ಮೋಸ ಮಾಡಿದ್ದಾರೆ. ಹೈಕೋರ್ಟಿನ ಕೆಲವು ದಾಖಲೆಗಳನ್ನೇ ಆರೋಪಿಗಳು ತಿರುಚಿದ್ದಾರೆ. ಕೊಟ್ಟ ಹಣಕ್ಕೆ ಕೆಲಸವು ಸಿಗದೆ ಹಣವು ವಾಪಸ್ ಆಗದೆ ಹಣ ಕೊಟ್ಟು ವಂಚನೆಗೊಳಗಾದವರು ಅಳಲು ತೋಡಿಕೊಂಡಿದ್ದಾರೆ. ಈ ಕುರಿತು ಗಂಗಮ್ಮನ ಗುಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Key words: FIR, cheating, jobs , High Court







