ವೀಕೆಂಡ್ ಕರ್ಫ್ಯೂ ಬಗ್ಗೆ ಇಂದು ಅಂತಿಮ ನಿರ್ಧಾರ- ಸಚಿವ ಡಾ.ಕೆ.ಸುಧಾಕರ್.

ಬೆಂಗಳೂರು,ಜನವರಿ,17,2022(www.justkannada.in): ಇಂದು ತಜ್ಞರ ಜತೆಗಿನ ಸಭೆ ಬಳಿಕ ಚರ್ಚಿಸಿ ವೀಕೆಂಡ್ ಕರ್ಫ್ಯೂ ಬಗ್ಗೆ ಅಂತಿಮ ನಿರ್ಧಾರ ತೆಗೆದುಕೊಳ್ಳಲಾಗುತ್ತದೆ ಎಂದು ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ತಿಳಿಸಿದ್ದಾರೆ.

ಈ ಕುರಿತು ಇಂದು ಮಾತನಾಡಿದ ಸಚಿವ ಡಾ.ಕೆ.ಸುಧಾಕರ್,  ಇಂದಿನ ಸಭೆಯಲ್ಲಿ ವೀಕೆಂಡ್ ಕರ್ಫ್ಯೂ ಬಗ್ಗೆ  ತಜ್ಞರ ಜತೆ ಚರ್ಚಿಸುತ್ತೇವೆ. ಸಭೆ ಬಳಿಕ ಅಂತಿಮ ತೀರ್ಮಾನ ತೆಗೆದುಕೊಳ್ಳುತ್ತೇವೆ. ಕೊರೋನಾ ತಡೆಗೆ ನಾವು ಎಲ್ಲಾ ರೀತಿಯ ಕಟ್ಟುನಿಟ್ಟಿನ ಕ್ರಮ ಕೈಗೊಂಡಿದ್ದೇವೆ.  ಸಾವು ನೋವು ಆಗಬಾರದು ಎಂಬುದು ನಮ್ಮ ಆದ್ಯತೆ.  ಹೆಚ್ಚು ಟೆಸ್ಟ್ ಮಾಡಿದ್ದಾಗ ಹೆಚ್ಚು ಪ್ರಕರಣ ಪತ್ತೆಯಾಗುತ್ತದೆ ಎಂದರು.

ತಜ್ಞರ ಸಭೆಯಲ್ಲಿ ಮಕ್ಕಳ ಆರೋಗ್ಯದ ಬಗ್ಗೆಯೂ ಚರ್ಚೆ ನಡೆಸಲಾಗುತ್ತದೆ.  ಸೋಂಕು ನಿಯಂತ್ರಣಕ್ಕೆ ಎಲ್ಲಾ ರೀತಿಯ ಕ್ರಮ ಕೈಗೊಂಡಿದ್ದೇವೆ. ಬೆಂಗಳೂರಿನಲ್ಲಿ  ಕೋವಿಡ್ ಕಡಿಮೆಯಾಗುತ್ತಿದೆ. ರಾಜ್ಯದಲ್ಲಿ ಶೀತ ಜ್ವರ ಜಾಸ್ತಿಯಾಗಿದೆ. ಡಿಸಂಬರ್ ನಿಂದ ಫೆಬ್ರವರಿವರೆಗೂ ಜ್ವರ ಶೀತ ಇರುತ್ತದೆ.  ಅಲ್ಲದೆ ರಾಜ್ಯದಲ್ಲಿ ಸೋಂಕಿತರ ಸಾವಿನ ಪ್ರಮಾಣ ಕಡಿಮೆಯಾಗಿದೆ ಎಂದು ತಿಳಿಸಿದರು.

Key words: Final decision- Weekend Curfew- Minister -Dr. K. Sudhakar