ಚಿತ್ರೀಕರಣದ ವೇಳೆ ಕೆಲವರು ನಿಯಮ ಪಾಲಿಸುತ್ತಿಲ್ಲ: ಮತ್ತಷ್ಟು ಕಠಿಣ ನಿಯಮ ಜಾರಿ- ಸಿಎಂ ಬಸವರಾಜ ಬೊಮ್ಮಾಯಿ.

ಬೆಂಗಳೂರು,ಆಗಸ್ಟ್,10,2021(www.justkannada.in): ಚಿತ್ರೀಕರಣದ ವೇಳೆ  ಕೆಲವರು ನಿಯಮ ಪಾಲಿಸುತ್ತಿಲ್ಲ. ಹೀಗಾಗಿ ಮತ್ತಷ್ಟು ಕಠಿಣ ನಿಯಮ ಜಾರಿ ಮಾಡುತ್ತೇವೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.

ಲವ್ ಯು ರಚ್ಚು ಶೂಟಿಂಗ್ ವೇಳೆ ಫೈಟರ್ ವಿವೇಕ್ ಸಾವು ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಸಿಎಂ ಬಸವರಾಜ ಬೊಮ್ಮಾಯಿ, ಇಂತಹ ಹಲವು ಘಟನೆಗಳು ಬೆಳಕಿಗೆ ಬರುತ್ತವೆ. ಚಿತ್ರೀಕರಣ ವೇಳೆ ಕೆಲವರು ನಿಯಮ ಪಾಲಿಸುತ್ತಿಲ್ಲ. ಹೀಗಾಗಿ ಕಠಿಣ ನಿಯಮ ಜಾರಿ ಕುರಿತು ನಾಳೆ ಅಥವಾ ನಾಡಿದ್ಧು ಆದೇಶ ಹೊರಡಿಸುತ್ತೇವೆ ಎಂದರು.

ಸಂಜೆ 5 ಗಂಟೆಗೆ ಗೃಹ ಇಲಾಖೆ ಉನ್ನತ ಅಧಿಕಾರಿಗಳ ಜತೆ ಸಭೆ ಇದೆ. ಬೆಂಗಳೂರು ನಗರ ಅಭಿವೃದ್ಧಿ ಸಂಬಂಧ ಗೃಹ ಕಚೇರಿ ಕೃಷ್ಣಾದಲ್ಲಿ ಇಂದು ಸಂಜೆ ಬಿಡಿಎ, ಬಿಬಿಎಂಪಿ, ಬಿಎಂಆರ್ ಸಿಎಲ್ ಜತೆ ಪ್ರಗತಿ ಪರಿಶೀಲನಾ ಸಭೆ ನಡೆಸುತ್ತೇನೆ ಎಂದು ತಿಳಿಸಿದರು.

ENGLISH SUMMARY…

A few of them are not following rules while film shooting: CM Bommai implements stricter rules
Bengaluru, August 10, 2021 (www.justkannada.in): “A few people are not following the rules while film shooting. Hence, we have decided to implement stricter rules,” opined Chief Minister Basavaraj Bommai.
Replying to the media persons question about the death of a stunt man named Vivek yesterday, while shooting for a film titled, ‘Love you Rachchu,’ the Chief Minister said, such incidents come to light often. “A few people are not following the rules while shooting films, hence we have decided to implement stricter rules. The orders regarding this will be given tomorrow or the day after,” he added.
“A higher officials meeting is organized today at 5.00 pm, at the official residence Krishna. A discussion will be held with the BDA, BBMP, BMRCL, and other officials,” he informed.
Keywords: Chief Minister/ Basavaraj Bommai/ film shooting/ rules/ not following/ stricter rules

Key words: film-shooting-tuff-rules-enforcement- CM -Basavaraja Bommai