ನವೆಂಬರ್ 3 ರಂದು 2018 ಹಾಗೂ 2019 ನೇ ಸಾಲಿನ ಚಲನಚಿತ್ರೋತ್ಸವ ಪ್ರಶಸ್ತಿ ಪ್ರಧಾನ ಸಮಾರಂಭ: ಜಿ ಲಕ್ಷ್ಮೀಕಾಂತ ರೆಡ್ಡಿ

The District Administration and the Information and Public Relations Department will organize the State Award Ceremony for the years 2018 and 2019 at the Convocation Hall of the Karnataka Open University on November 3 at 5 pm, said District Collector Lakshmikant Reddy G.

 

ಮೈಸೂರು, ಅ.೨೭, ೨೦೨೫: ಜಿಲ್ಲಾಡಳಿತ ಹಾಗೂ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ವತಿಯಿಂದ ನವೆಂಬರ್ 3 ರಂದು ಸಂಜೆ 5 ಗಂಟೆಗೆ ಕರ್ನಾಟಕ ಮುಕ್ತ ವಿಶ್ವವಿದ್ಯಾಲಯದ ಘಟಿಕೋತ್ಸವ ಭವನದಲ್ಲಿ 2018 ಹಾಗೂ 2019 ನೇ ಸಾಲಿನ ರಾಜ್ಯ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಹಮ್ಮಿಕೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ಲಕ್ಮ್ಮೀಕಾಂತ ರೆಡ್ಡಿ ಜಿ ಅವರು ತಿಳಿಸಿದರು.

ಅವರು ಇಂದು ಮೈಸೂರು ಮಹಾನಗರ ಪಾಲಿಕೆ ಕಚೇರಿಯಲ್ಲಿ ಆಯೋಜಿಸಲಾಗಿದ್ದ ಪೂರ್ವಭಾವಿ ಸಿದ್ಧತಾ ಸಭೆಯ ಅಧ್ಯಕ್ಷತೆ ವಹಿಸಿ‌ ಮಾತನಾಡಿದರು. ನವೆಂಬರ್ 3 ರಂದು ನಡೆಯಲಿರುವ ಕಾರ್ಯಕ್ರಮದಲ್ಲಿ ಮಾನ್ಯ ಮುಖ್ಯಮಂತ್ರಿಗಳು ಉತ್ತಮ ನಟ, ನಟಿ, ನಿರ್ದೇಶಕರು ಹಾಗೂ ಇನ್ನಿತರ ಪ್ರಶಸ್ತಿ ವಿಜೇತರಿಗೆ ಪ್ರಶಸ್ತಿ ಪ್ರಧಾನ ಮಾಡಿ ಗೌರವಿಸಲಿದ್ದಾರೆ ಎಂದರು.

ಕಾರ್ಯಕ್ರಮಕ್ಕೆ ಶಿಷ್ಟಾಚಾರದಂತೆ ಜನಪ್ರತಿನಿಧಿಗಳನ್ನು ಆಹ್ವಾನಿಸಬೇಕು. ವೇದಿಕೆಯನ್ನು ಉತ್ತಮ ರೀತಿಯಲ್ಲಿ ಸಜ್ಜುಗೊಳಿಸಬೇಕು. ಯಾವುದೇ ಲೋಪ ಉಂಟಾಗದಂತೆ ಅಧಿಕಾರಿಗಳು ಸಿದ್ಧತೆ ಮಾಡಿಕೊಳ್ಳಬೇಕು ಎಂದರು.

ಕಾರ್ಯಕ್ರಮಕ್ಕೆ ಆಗಮಿಸುವ ಸಿನಿಮಾ ಗಣ್ಯರಿಗೆ ವಾಸ್ತವ್ಯದ ವ್ಯವಸ್ಥೆ ಬೇಕಿದ್ದಲ್ಲಿ ಮೊದಲೇ ಪಟ್ಟಿ ಮಾಡಿಕೊಂಡು ಉತ್ತಮ ವಾಸ್ತವ್ಯವನ್ನು ಕಲ್ಪಿಸಬೇಕು ಎಂದರು.

ಕಾರ್ಯಕ್ರಮ ನಡೆಯುವ ಸ್ಥಳದಲ್ಲಿ ವಾಹನಗಳಿಗೆ  ಸಾಮಾನ್ಯ ಹಾಗೂ ಗಣ್ಯರ ಪಾರ್ಕಿಂಗ್ ವ್ಥವಸ್ಥೆಗೆ ಇರುವ ಸ್ಥಳಾವಕಾಶ ಹಾಗೂ ಸ್ಥಳವಕಾಶವನ್ನು ನಿಗದಿ‌ಮಾಡಿ ಬಂದೋಬಸ್ತ್ ಕಲ್ಪಿಸಬೇಕು ಎಂದರು.

ಸಭೆಯಲ್ಲಿ ಮೈಸೂರು ಮಹಾನಗರಪಾಲಿಕೆ ಆಯುಕ್ತ ಶೇಖ್ ತನ್ವೀರ್ ಆಸಿಫ್, ಮೈಸೂರು ನಗರ ಡಿ.ಸಿ.ಪಿ ಆರ್.ಎನ್ ಬಿಂದುಮಣಿ, ಸಹಾಯಕ‌ ಪೊಲೀಸ್  ಆಯುಕ್ತ  ಶಿವಶಂಕರ್, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಉಪನಿರ್ದೇಶಕ ವಿನೋದ್ ಚಂದ್ರ ಸೇರಿದಂತೆ ಇನ್ನಿತರೆ ಅಧಿಕಾರಿಗಳು ಉಪಸ್ಥಿತರಿದ್ದರು.

key words: The 2018 and 2019, Film Festival Awards Ceremony, held on November 3, G Lakshmikanth Reddy

 

SUMMARY:

The 2018 and 2019, Film Festival, Awards Ceremony, held on November 3, G Lakshmikanth Reddy

The District Administration and the Information and Public Relations Department will organize the State Award Ceremony for the years 2018 and 2019 at the Convocation Hall of the Karnataka Open University on November 3 at 5 pm, said District Collector Lakshmikant Reddy G.