Wednesday, August 19, 2026

BDA Apartments

Home Crime ಮೈಸೂರಿನಲ್ಲಿ ಪ್ರೊ.ಕೆ.ಎಸ್.ಭಗವಾನ್ ವಿರುದ್ಧ ದೂರು ದಾಖಲು.

ಮೈಸೂರಿನಲ್ಲಿ ಪ್ರೊ.ಕೆ.ಎಸ್.ಭಗವಾನ್ ವಿರುದ್ಧ ದೂರು ದಾಖಲು.

ಮೈಸೂರು,ಅಕ್ಟೋಬರ್,16,2023(www.justkannada.in): ಒಕ್ಕಲಿಗರ ಬಗ್ಗೆ ಅವಹೇಳನ ಹೇಳಿಕೆಗೆ ಸಂಬಂಧಿಸಿದಂತೆ ಪ್ರೊ.ಕೆ.ಎಸ್.ಭಗವಾನ್ ವಿರುದ್ಧ ಮೈಸೂರಿನಲ್ಲಿ ದೂರು ದಾಖಲಾಗಿದೆ.

ಮೈಸೂರಿನ ದೇವರಾಜ ಠಾಣೆಯಲ್ಲಿ ಪ್ರೊ.ಭಗವಾನ್ ವಿರುದ್ಧ ಅಖಿಲ ಕರ್ನಾಟಕ ಒಕ್ಕಲಿಗರ ಸಂಘ ದೂರು ದಾಖಲಿಸಿದೆ. ಭಗವಾನ್ ದುರುದ್ದೇಶಪೂರ್ವಕವಾಗಿ ಹೇಳಿಕೆ ನೀಡಿದ್ದಾರೆ. ಜಾತಿ- ಜಾತಿಗಳ ನಡುವೆ ತಂದಿಡುವ ಕೆಲಸ ಮಾಡುತ್ತಿದ್ದಾರೆ ಎಂದು ಒಕ್ಕಲಿಗರ ಸಂಘ ಆರೋಪಿಸಿ ದೂರು ನೀಡಿದೆ.

ಅಲ್ಲದೆ ಪ್ರೊ.ಭಗವಾನ್ ಬಂಧಿಸಬೇಕು. ವಿಶ್ವವಿದ್ಯಾನಿಲಯ ನೀಡುವ ಸವಲತ್ತುಗಳನ್ನ ನಿಲ್ಲಿಸಬೇಕು ಎಂದು ಸಂಘಟನೆ ಆಗ್ರಹಿಸಿದೆ. ಅಕ್ಟೋಬರ್ 13 ರಂದು ನಡೆದ ಮಹಿಷಾ ಉತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದ್ದ ಪ್ರೊ. ಭಗವಾನ್,  ಒಕ್ಕಲಿಗರು ಸಂಸ್ಕೃತಿ ಹೀನರು ಎಂಬ ಪದ ಬಳಕೆ ಮಾಡಿದ್ದರು. ಈ ಕುರಿತು ಈಗಾಗಲೇ ಭಗವಾನ್ ವಿರುದ್ಧ ಹಲವು ಕೇಸ್ ಗಳು ದಾಖಲಾಗಿವೆ.

Key words: File – complaint- against -Prof. KS Bhagavan – Mysore.