ಕಾಂಗ್ರೆಸ್ ಸರ್ಕಾರದ ಮೋಸದ ಗ್ಯಾರಂಟಿಗಳ ವಿರುದ್ಧ ಬಿಜೆಪಿಯಿಂದ ಹೋರಾಟ- ಶಾಸಕ ಆರ್.ಅಶೋಕ್.

ಬೆಂಗಳೂರು,ಜೂನ್,8,2023(www.justkannada.in): ಕಾಂಗ್ರೆಸ್ ಸರ್ಕಾರ ನೀಡುತ್ತಿರುವ ಮೋಸದ ಗ್ಯಾರಂಟಿಗಳ ವಿರುದ್ಧ ಬಿಜೆಪಿ ಹೋರಾಟ ಮಾಡಲಿದೆ ಎಂದು  ಶಾಸಕ ಆರ್.ಅಶೋಕ್ ಹೇಳಿದರು.

ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಮಾಜಿ ಸಚಿವ ಆರ್.ಅಶೋಕ್,  ಜಾತಿ ಹೆಸರಿನಲ್ಲೂ ಕಾಂಗ್ರೆಸ್ ಸರ್ಕಾರ ಗ್ಯಾರಂಟಿ ನೀಡುತ್ತಿದೆ. ವಿದ್ಯುತ್ ದರ ಹೆಚ್ಚಿಸಿ ಹಣ  ಸಂಗ್ರಹ ಮಾಡಲು ಹೊರಟಿದೆ . ಜನರಿಂದಲೇ ಹಣ ಸಂಗ್ರಹಿಸಿ ಜನರಿಗೆ ಕೊಡುವುದು. ಕಾಂಗ್ರೆಸ್ ಬುದ್ದಿಯನ್ನ ಮೆಚ್ಚಬೇಕು. ಗ್ಯಾರಂಟಿ ಯೋಜನೆ ಬಗ್ಗೆ ಸಚಿವರೇ ಗೊಂದಲ ಸೃಷ್ಠಿಸುತ್ತಿದ್ದಾರೆ.  ಮೋಸದ ಗ್ಯಾರಂಟಿಗಳ ವಿರುದ್ದ ಬಿಜೆಪಿ ಹೋರಾಟ ಮುಂದುವರೆಯಲಿದೆ ಎಂದು ಹೇಳಿದರು.

Key words: Fight – BJP- against- fraudulent -guarantees – MLA -R. Ashok.