ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿ ಹೋರಾಟ: ಬಿಹಾರ್ ಬಂದ್ ವೇಳೆ ಗಲಭೆ, ಲಾಠಿ ಪ್ರಹಾರ

ಪಾಟ್ನಾ, ಡಿಸೆಂಬರ್ 21, 2019 (www.justkannada.in): ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ಮತ್ತು ರಾಷ್ಟ್ರೀಯ ಪೌರತ್ವ ನೋಂದಣಿ(ಎನ್‍ಆರ್‍ಸಿ) ವಿರೋಧಿಸಿ ಇಂದು ಕರೆ ನೀಡಲಾಗಿದ್ದ ಬಿಹಾರ್ ಬಂದ್ ವೇಳೆ ಅಲ್ಲಲ್ಲಿ ಗಲಭೆಗಳು ಭುಗಿಲೆದೆ.

ಪರಿಸ್ಥಿತಿ ನಿಯಂತ್ರಿಸಲು ಪೊಲೀಸರು ಲಾಠಿ ಪ್ರಹಾರ ಮಾಡಿದ್ದಾರೆ. ಈ ಘಟನೆಯಲ್ಲಿ ಅನೇಕರು ಗಾಯಗೊಂಡಿದ್ದು, ಕಲ್ಲು ತೂರಾಟದಲ್ಲಿ ಪೊಲೀಸರಿಗೂ ಗಾಯಗಳಾಗಿವೆ. ಲಾಲೂಪ್ರಸಾದ್ ಯಾದವ್ ನೇತೃತ್ವದ ರಾಷ್ಟ್ರೀಯ ಜನತಾದಳ(ಆರ್‍ಜೆಡಿ) ಇಂದು ಕರೆ ನೀಡಲಾಗಿದ್ದ ಬಿಹಾರ್ ಬಂದ್‍ನಿಂದಾಗಿ ರಾಜಧಾನಿ ಪಾಟ್ನಾ ಸೇರಿದಂತೆ ಹಲವೆಡೆ ರೈಲು ಮತ್ತು ಇತರ ವಾಹನಗಳ ಸಂಚಾರ ಸ್ಥಗಿತಗೊಂಡಿದೆ.

ಪಾಟ್ನಾದ ಹಾಜಿಪುರ, ಪಾಟ್ನಾಗಾಂಧಿ ಸೇತು ರಸ್ತೆ, ಎನ್‍ಎಚ್87, ಎನ್‍ಎಚ್ 71 ಮತ್ತು ಎನ್‍ಎಚ್ 110 ಹೆದ್ದಾರಿಗಳು ಸೇರಿದಂತೆ ಹಲವು ರಸ್ತೆಗಳು ಆರ್‍ಜೆಡಿ ಕಾರ್ಯಕರ್ತರು ರಸ್ತೆತಡೆ ನಡೆಸಿ ವಾಹನಗಳ ಸಂಚಾರಕ್ಕೆ ಅಡ್ಡಿಯುಂಟು ಮಾಡಿದರು.