ಭ್ರೂಣ ಪತ್ತೆ, ಹತ್ಯೆ ಪ್ರಕರಣ: ಮೈಸೂರಿನ ಮತ್ತೊಂದು ಆಸ್ಪತ್ರೆಗೆ ಬೀಗ ಜಡಿದ ಅಧಿಕಾರಿಗಳು.

ಮೈಸೂರು,ಡಿಸೆಂಬರ್,19,2023(www.justkannada.in): ಭ್ರೂಣ ಪತ್ತೆ, ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಅಧಿಕಾರಿಗಳ ದಾಳಿ ಮುಂದುವರೆದಿದ್ದು, ಇದೀಗ  ಮೈಸೂರಿನ ಮತ್ತೊಂದು ಆಸ್ಪತ್ರೆಗೆ ಬೀಗ ಜಡಿಯಲಾಗಿದೆ.

ಭ್ರೂಣಗಳ ಸ್ಕ್ಯಾನಿಂಗ್ ಇಮೇಜ್‌ ಗಳನ್ನೂ ಇಟ್ಟುಕೊಳ್ಳದ ಮೈಸೂರಿನ ಬೋಗಾದಿಯಲ್ಲಿರುವ  ಪ್ರತಿಷ್ಠಿತ ಶ್ರೀದೇವಿ ನರ್ಸಿಂಗ್ ಹೋಂಗೆ ಅಧಿಕಾರಿಗಳು ಬೀಗ ಹಾಕಿದ್ದಾರೆ. ಬೆಂಗಳೂರಿನ ಸಕ್ಷಮ ಅಧಿಕಾರಿಗಳ ಸಮ್ಮುಖದಲ್ಲಿ ತಾಲೂಕು ಆರೋಗ್ಯಾಧಿಕಾರಿ ಪುಟ್ಟತಾಯಮ್ಮ ನೇತೃತ್ವದಲ್ಲಿ ದಾಳಿ ನಡೆಯಿತು.

ಎರಡು ವರ್ಷದ ಅವಧಿಯಲ್ಲಿ ಮಾಡಲಾದ ಸ್ಕ್ಯಾನಿಂಗ್ ಡಾಟಾ ಇಟ್ಟುಕೊಳ್ಳುವುದು ಕಡ್ಡಾಯವಾಗಿದೆ‌. ಅಧಿಕಾರಿಗಳು ದಾಳಿ ವೇಳೆ ಮೂರು ತಿಂಗಳ ಸ್ಕ್ಯಾನಿಂಗ್ ಡಾಟಾ ಕೇಳಿದ್ದು, ಆದರೆ ಶ್ರೀದೇವಿ ನರ್ಸಿಂಗ್ ಹೋಮ್ ಭ್ರೂಣದ ಫೋಟೋ, ದಾಖಲೆ ಒದಗಿಸಲು ವಿಫಲವಾಗಿದೆ.

ಕೆಪಿಎಂಇ ಕಾಯ್ದೆ ಪ್ರಕಾರ ಸಿಬ್ಬಂದಿ ದಾಖಲೆಗಳನ್ನು ಒದಗಿಸದ ಹಿನ್ನೆಲೆ ಆಲ್ಟ್ರಾ ಸೌಂಡ್ ಸ್ಕ್ಯಾನಿಂಗ್ ಯಂತ್ರ ಸೀಜ್ ಮಾಡಿದ್ದು,  ದಾಳಿ ವೇಳೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಒಳ ಹಾಗೂ ಹೊರ ರೋಗಿಗಳನ್ನು ಬೇರೆ ಆಸ್ಪತ್ರೆಗಳ ಸ್ಥಳಾಂತರ ಮಾಡಲಾಗಿದೆ.

Key words: Feticide-case- Officer- locked –another- hospital – Mysore.