ಭಾರತ ಕ್ರಿಕೆಟ್‌ ತಂಡಕ್ಕೆ ಉಗ್ರ ದಾಳಿಯ ಭೀತಿ

ಬೆಂಗಳೂರು, ಅಕ್ಟೋಬರ್ 30, 2019 (www.justkannada.in): ಭಾರತ ಕ್ರಿಕೆಟ್‌ ತಂಡಕ್ಕೆ ಉಗ್ರ ದಾಳಿಯ ಭೀತಿ ಎದುರಾಗಿದೆ.

ಬಾಂಗ್ಲಾದೇಶ ತಂಡದ ವಿರುದ್ಧ ದೆಹಲಿಯ ಅರುಣ್‌ ಜೇಟ್ಲಿ ಕ್ರೀಡಾಂಗಣದಲ್ಲಿ ನವೆಂಬರ್ 3ರಂದು ನಡೆಯಲಿರುವ ಟಿ-20 ಪಂದ್ಯದ ವೇಳೆ ಭದ್ರತೆ ಹೆಚ್ಚಿಸುವಂತೆ ದೆಹಲಿ ಪೊಲೀಸರಿಗೆ ರಾಷ್ಟ್ರೀಯ ತನಿಖಾ ದಳ ಸೂಚಿಸಿದೆ.

ಭಾರತ ತಂಡ ಹಾಗೂ ಪ್ರಮುಖ ರಾಜಕಾರಣಿಗಳ ಹೆಸರು ಒಳಗೊಂಡ ‌ಅನಾಮಧೇಯ ಬೆದರಿಕೆ ಪತ್ರವೊಂದು ಎನ್‌ಐಎ ಕೈಸೇರಿದೆ. ಅದರಲ್ಲಿ ಪ್ರಮುಖವಾಗಿ ನಾಯಕ ವಿರಾಟ್‌ ಕೊಹ್ಲಿ ಗುರಿ ಮಾಡಲಾಗಿದೆ ಎಂದು ಮೂಲಗಳು ತಿಳಿಸಿವೆ.