Friday, September 11, 2026

BDA Apartments

Home Crime 13 ವರ್ಷದ ನಂತರ ಜೈಲಿನಿಂದ ಬಿಡುಗಡೆಯಾದ ಆರೋಪಿ ಕೊಂದು ತಂದೆ ಹತ್ಯೆಗೆ ಪ್ರತಿಕಾರ ತೀರಿಸಿಕೊಂಡ ಪುತ್ರ

13 ವರ್ಷದ ನಂತರ ಜೈಲಿನಿಂದ ಬಿಡುಗಡೆಯಾದ ಆರೋಪಿ ಕೊಂದು ತಂದೆ ಹತ್ಯೆಗೆ ಪ್ರತಿಕಾರ ತೀರಿಸಿಕೊಂಡ ಪುತ್ರ

ಹಾಸನ ನವೆಂಬರ್,27,2024 (www.justkannada.in): ತನ್ನ ತಂದೆಯನ್ನು ಕೊಂದು ಜೈಲು ಸೇರಿ 13 ವರ್ಷಗಳ ಬಳಿಕ ಜೈಲಿನಿಂದ ಬಿಡುಗಡೆಯಾದ ಆರೋಪಿಯನ್ನು ಮಗ ಕೊಚ್ಚಿ ಕೊಲೆ ಮಾಡಿ ಸೇಡು ತೀರಿಸಿಕೊಂಡಿರುವ ಘಟನೆ ಹಾಸನ ಜಿಲ್ಲೆಯಲ್ಲಿ ನಡೆದಿದೆ.

ಹಾಸನ ಜಿಲ್ಲೆ ಅರಕಲಗೂಡು ತಾಲೂಕಿನ ದಡದಹಳ್ಳಿ ಗ್ರಾಮದಲ್ಲಿ ಈ ಘಟನೆ ನಡೆದಿದೆ. ನಿರ್ವಾಣಪ್ಪ ಎಂಬಾತನನ್ನೇ ಮೂರ್ತಿ ಎಂಬಾತ ಕೊಲೆ ಮಾಡಿ ಪ್ರತಿಕಾರ ತೀರಿಸಿಕೊಂಡಿದ್ದಾನೆ.

2011 ರಲ್ಲಿ ಲಕ್ಕಪ್ಪ ಎಂಬುವವರ ಕೊಲೆ ಪ್ರಕರಣದಲ್ಲಿ ನಿರ್ವಾಣಪ್ಪ ಎಂಬಾತ ಜೈಲು ಸೇರಿದ್ದನು. ಜೈಲು ಶಿಕ್ಷೆ ಅನುಭವಿಸಿ  13 ವರ್ಷಗಳ ನಂತರ ಜೈಲಿನಿಂದ ಇತ್ತೀಚೆಗೆ ನಿರ್ವಾಣಪ್ಪ ರಿಲೀಸ್ ಆಗಿ ಬಂದಿದ್ದನು.

ತಂದೆ ಹತ್ಯೆಗೆ ಪ್ರತಿಕಾರ ತೀರಿಸಿಕೊಳ್ಳಲು ಕಾಯುತ್ತಿದ್ದ ಲಕ್ಕಪ್ಪನ ಮಗ ಮೂರ್ತಿಯು ನಿರ್ವಾಣಪ್ಪ ಜೈಲಿನಿಂದ ಬರುತ್ತಿದ್ದಂತೆ ಹತ್ಯೆ ಮಾಡಿದ್ದಾನೆ. ಈ ಕುರಿತು ಅರಕಲಗೂಡು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Key words: father, murder, Son, killing,  accused