ರೈತರ ಟ್ರ್ಯಾಕ್ಟರ್ ಪರೇಡ್ ತಡೆದರೆ ಪರಿಸ್ಥಿತಿ ವಿಕೋಪಕ್ಕೆ : ರೈತ ಮುಖಂಡ ಬಡಗಲಪುರ ನಾಗೇಂದ್ರ

0
268

ರಾಮನಗರ,ಜನವರಿ,24,2021(www.justkannada.in) : ರೈತರು ಹಮ್ಮಿಕೊಂಡಿರುವ ಟ್ರ್ಯಾಕ್ಟರ್ ಪರೇಡ್ ಬೆಂಗಳೂರು ಪ್ರವೇಶ ಮಾಡದಂತೆ ಪೋಲಿಸರು ತಡೆದರೆ ಪರಿಸ್ಥಿತಿ ವಿಕೋಪಕ್ಕೆ ಹೋಗುತ್ತದೆ ಎಂದು ರೈತ ಸಂಘದ ರಾಜ್ಯಾಧ್ಯಕ್ಷ ಬಡಗಲಪುರ ನಾಗೇಂದ್ರ ಎಚ್ಚರಿಕೆ ನೀಡಿದರು.jk

ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಗಣರಾಜ್ಯೋತ್ಸವದಂದು ಬೆಂಗಳೂರಿನಲ್ಲಿ ನಡೆಯುವ ರೈತರ ಪರೇಡ್ನಲ್ಲಿ ಭಾಗವಹಿಸಲು ರಾಜ್ಯದ ನಾಲ್ಕು ಭಾಗಗಳಿಂದ ರೈತರು ತಮ್ಮ ವಾಹನಗಳೊಂದಿಗೆ ಆಗಮಿಸಲಿದ್ದಾರೆ ಎಂದರು.

 

ಸರ್ಕಾರ ಪೋಲಿಸರನ್ನು ಬಳಸಿಕೊಂಡು ಗಣರಾಜ್ಯೋತ್ಸವದ ರೈತ ಪೆರೇಡ್ ವಿಫಲಗೊಳಿಸಲು ಹುನ್ನಾರ ನಡೆಸಿದೆ. ಶಾಂತಿಯುತವಾಗಿ ನಡೆಯುವ ರೈತ ಪೆರೇಡ್ಗೆ ಪೋಲಿಸರು ಅವಕಾಶ ಮಾಡಿಕೊಡಬೇಕು ಎಂದು ಹೇಳಿದರು.

ಒಂದು ವೇಳೆ ರೈತ ಹೋರಾಟ ವಿಫಲಗೊಳಿಸಲು ರೈತರು ತಮ್ಮ ವಾಹನದೊಂದಿಗೆ ಬೆಂಗಳೂರು ಪ್ರವೇಶಮಾಡದಂತೆ ಪೋಲಿಸರು ತಡೆದರೆ ರೈತರು ರಾಜ್ಯದ ಎಲ್ಲಾ ರಸ್ತೆಗಳನ್ನು ಬಂದ್ ಮಾಡುತ್ತಾರೆ ಎಂದು ಎಚ್ಚರಿಸಿದರು.farmers,Tractor,Parade,not,situation,disaster,peasant,leader,Badagalpur Nagendra

ನಮ್ಮ ಹೋರಾಟ ರಾಜ್ಯ, ಕೇಂದ್ರ ಸರ್ಕಾರದ ವಿರುದ್ಧವಲ್ಲ. ಅವರು ತೆಗೆದುಕೊಂಡಿರುವ ರೈತ ವಿರೋಧಿ ಮತ್ತು ಕಾರ್ಮಿಕ ವಿರೋಧಿ ಕಾಯ್ದೆಗಳ ವಿರುದ್ದವಾಗಿದ್ದು, ಕೇಂದ್ರ ಸರ್ಕಾರ ರೈತ ವಿರೋಧಿ ಕಾಯ್ದೆಗಳನ್ನು ವಾಪಸ್ ಪಡೆಯಬೇಕು ಎಂದು ತಿಳಿಸಿದರು.

key words : farmers-Tractor-Parade-not-situation-disaster-peasant-leader-Badagalpur Nagendra