ರೈತರೊಂದಿಗಿದ್ದು ಧೈರ್ಯ ತುಂಬುವ ಬದಲು ಕ್ಷೇತ್ರದಿಂದಲೇ ಕಾಲ್ಕಿತ್ತಿದ್ದಾರೆ- ಸಂಸದೆ ಶೋಭಾ ಕರಂದ್ಲಾಜೆಗೆ ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ತಿರುಗೇಟು….

ಬೆಂಗಳೂರು, ಅ, 7,2019(www.justkannada.in):  ಹೆಚ್.ಡಿ ಕುಮಾರಸ್ವಾಮಿ ಆಲೋಗೆಡ್ಡೆ ಬೆಳೆದು ಶ್ರೀಮಂತರಾಗಿದ್ದಾರೆ ಎಂದು ಹೇಳಿಗೆ ನೀಡಿದ್ದ ಸಂಸದೆ ಶೋಭಾ ಕರಂದ್ಲಾಜೆಗೆ ಟ್ವಿಟ್ಟರ್ ನಲ್ಲೇ ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ತಿರುಗೇಟು ನೀಡಿದ್ದಾರೆ.

ಚಿಕ್ಕಮಗಳೂರು ಜಿಲ್ಲೆಯಲ್ಲಿ ಪ್ರವಾಹ ಬಂದು ಸಾವಿರಾರು ಕುಟುಂಬಗಳ ಬದುಕು ಡೋಲಾಯಮಾನವಾಗಿದೆ. ನೆರೆ ಪರಿಹಾರ ಸಿಗುತ್ತಿಲ್ಲ ಎಂದು ರೈತರು ಆತ್ಮಹತ್ಯೆಗೆ ಶರಣಾಗುತ್ತಿದ್ದಾರೆ’  ಈ ಸಂದರ್ಭದಲ್ಲಿ ಕ್ಷೇತ್ರದ ಲೋಕಸಭಾ ಸದಸ್ಯೆ ಶೋಭಾ ಕರಂದ್ಲಾಜೆ ಅವರು ಅವರೊಂದಿಗಿದ್ದು ಧೈರ್ಯ ತುಂಬುವ ಕೆಲಸ ಮಾಡುವ ಬದಲು ಸಂಸದೆ ಶೋಭಾ ಕರಂದ್ಲಾಜೆ  ಕ್ಷೇತ್ರದಿಂದ ಕಾಲ್ಕಿತ್ತಿರುವುದು ಅವರ ‘ರೈತಪರ ಕಾಳಜಿ’ಯನ್ನು ಎತ್ತಿತೋರಿಸುತ್ತದೆ’ ಎಂದು  ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ಟ್ವಿಟ್ಟರ್ ನಲ್ಲಿ ಟಾಂಗ್ ನೀಡಿದ್ದಾರೆ.

ಶೋಭಾ ಕರಂದ್ಲಾಜೆಗೆ ರೈತರ ಕಷ್ಟ ಏನು ಅಂತಾ ಗೊತ್ತು ಎಂದು ಹೆಚ್.ಡಿ ಕುಮಾರಸ್ವಾಮಿ ಟೀಕಿಸಿದ್ದರು. ಈ ಹೇಳಿಕೆಗೆ ಮೈಸೂರಿನಲ್ಲಿ ತಿರುಗೇಟು ನೀಡಿದ್ದ ಸಂಸದೆ ಶೋಭಾ ಕರಂದ್ಲಾಜೆ, ಕುಮಾರಸ್ವಾಮಿ ಏನು ಎಂಬುದು ಎಲ್ಲರಿಗೂ ಗೊತ್ತಿದೆ. ಅವರು ಆಲೊಗಡ್ಡೆ ಬೆಳೆದು ಶ್ರೀಮಂತರಾಗಿದ್ದರು ಎಂದು ಕಿಡಿಕಾರಿದ್ದರು.

Key words: farmers  –  Former CM HD Kumaraswamy -MP Shobha Karandlaje.