ಸಂಸದ ಪ್ರತಾಪ್ ಸಿಂಹ ಹಾಗೂ ಮಾಜಿ ಸಚಿವ ಸಿ ಎಚ್ ವಿಜಯಶಂಕರ್‌ ಗೆ ರೈತರಿಂದ ಘೇರಾವ್.

ಮೈಸೂರು,ಸೆಪ್ಟಂಬರ್,24,2021(www.justkannada,in):  ಮೈಸೂರು- ಕೊಡಗು ಸಂಸದ ಪ್ರತಾಪ್ ಸಿಂಹ ಹಾಗೂ ಮಾಜಿ ಸಚಿವ ಸಿ.ಹೆಚ್ ವಿಜಯಶಂಕರ್ ಅವರಿಗೆ ರೈತರು ಘೇರಾವ್ ಹಾಕಿದ ಘಟನೆ ನಡೆದಿದೆ.

ಪಿರಿಯಾಪಟ್ಟಣ ತಾಲ್ಲೂಕಿನ ಕಗ್ಗುಂಡಿ ತಂಬಾಕು ಹರಾಜು ಮಾರುಕಟ್ಟೆಯಲ್ಲಿ  ಸಂಸದ ಪ್ರತಾಪಸಿಂಹ, ಮಾಜಿ ಸಂಸದ ಸಿ ಎಚ್ ವಿಜಯಶಂಕರ್‌ ಗೆ ರೈತರು ಘೇರಾವ್ ಹಾಕಿದ್ದಾರೆ.  ಇಬ್ಬರು ನಾಯಕರು ತಂಬಾಕು ಹರಾಜು ಪೂಜೆಗೆ ಬಂದಿದ್ದರು.  ಈ ನಡುವೆ ಮೂಹೂರ್ತ ನೋಡಿ ಪೂಜೆ ಆರಂಭಿಸಿದಕ್ಕೆ ಸಂಸದ ಪ್ರತಾಪ್ ಸಿಂಹರಿಗೆ ರೈತರು ತರಾಟೆ ತೆಗೆದುಕೊಂಡರು.

ಆರಂಭದಲ್ಲೆ ಕಡಿಮೆ ಬೆಲೆಗೆ ತಂಬಾಕು ಹರಾಜಾಗಿದ್ದಕ್ಕೆ ಅಸಮಾಧಾನ  ವ್ಯಕ್ತಪಡಿಸಿದ ರೈತರು, ಬೆಳಿಗ್ಗೆ ಯಾಕೆ ಆರಂಭ ಮಾಡುತ್ತಿದ್ದೀರಿ ಎಂದು ಪ್ರಶ್ನಿಸಿದರು. ಇದಕ್ಕೆ ಉತ್ತರಿಸಿದ ಸಂಸದ ಪ್ರತಾಪ್ ಸಿಂಹ ಮುಹೂರ್ತ ನೋಡಿ ಆರಂಭ ಮಾಡುತ್ತಿದ್ದೇವೆ ಎಂದರು. ಈ ವೇಳೆ ರೈತರು ಮಾತಿನ ಚಕಮಕಿ ನಡೆಸಿದ್ದು ಸರಿಯಾಗಿ ಆರಂಭಿಕ ಬೆಲೆ‌‌ ನೀಡಿಲ್ಲ, ಕೇವಲ 185 ರೂಪಾಯಿ ಅರಂಭಿಕ ಬೆಲೆ ನೀಡಲಾಗಿದೆ ಎಂದು ಇಬ್ಬರು ನಾಯಕರ ವಿರುದ್ಧ ರೈತರು ಅಸಮಾಧಾನ ವ್ಯಕ್ತಪಡಿಸಿದರು.

Key words: farmer –outrage-mysore- MP Pratap simha – former minister- CH Vijayashankar.