ಕೋಡಿಹಳ್ಳಿ ಚಂದ್ರಶೇಖರ್ ಸ್ಟಿಂಗ್ ಆಪರೇಷನ್ 35 ಕೋಟಿ ಡಿಲ್ ವ್ಯವಹಾರದ ಬಗ್ಗೆ ರಾಜ್ಯ ಸರ್ಕಾರ ಸಮಗ್ರ ತನಿಖೆ ನಡೆಸಲಿ- ಕುರುಬೂರು ಶಾಂತಕುಮಾರ್ ಆಗ್ರಹ.

ಮೈಸೂರು,ಮೇ,29,2022(www.justkannada.in): ರೈತರ ಸೇವೆ ಹೆಸರಿನಲ್ಲಿ ಹಸಿರು ಶಾಲು ಹಾಕಿ ಹಣ ದೋಚುವುದು ಇಬ್ಬಂದಿ ವರ್ತನೆ, ರೈತ ಚಳುವಳಿಯ ಮುಖಂಡ ಕೋಡಿಹಳ್ಳಿ ಚಂದ್ರಶೇಖರ್ ಸ್ಟಿಂಗ್ ಆಪರೇಷನ್ 35 ಕೋಟಿ ಡಿಲ್ ವ್ಯವಹಾರದ ಬಗ್ಗೆ ರಾಜ್ಯ ಸರ್ಕಾರ ಸಮಗ್ರ ತನಿಖೆ ನಡೆಸಲಿ ಸತ್ಯಾಸತ್ಯತೆ ಜನತೆಗೆ ತಿಳಿಯಲಿ ಎಂದು ರಾಜ್ಯ ರೈತ ಸಂಘಟನೆಗಳ ಒಕ್ಕೂಟದ ರಾಜ್ಯಾಧ್ಯಕ್ಷ ಕುರುಬೂರು ಶಾಂತ ಕುಮಾರ್ ಆಗ್ರಹಿಸಿದರು.

ಈ ಕುರಿತು ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುವ ಅವರು ಹೇಳಿದ್ದಿಷ್ಟು…
ದೆಹಲಿ ರೈತ ಹೋರಾಟದ ಶಕ್ತಿಯನ್ನು ಸಹಿಸಲಾಗದೆ ರೈತ ಚಳುವಳಿಯನ್ನು ಹತ್ತಿಕ್ಕಲು ದುರ್ಬಲ ಮಾಡಲು ಕಾಣದ ಕೈಗಳ ಪಿತೂರಿಯಿಂದ, ಚುನಾವಣಾ ವರ್ಷದ ರಾಜಕೀಯ ದೊಂಬರಾಟ ನಡೆಯುತ್ತಿರುವ ಕಾರಣ ಸ್ಟೀಂಜ್ ಆಪರೇಷನ್ 35 ಕೋಟಿ ಡೀಲ್ ಪ್ರಕರಣ ಹೊರಗೆ ಬಂದಿದೆ ಸಾಮಾಜಿಕ ಜಾಲತಾಣ ಹಾಗೂ ವಿದ್ಯುನ್ಮಾನ ಮಾಧ್ಯಮ ಮೂಲಕ ಸುದ್ದಿಯಾಗುತ್ತಿದೆ , ಈ ಪ್ರಕರಣದಲ್ಲಿ ರೈತ ಮುಖಂಡ ಎಂದು ಹೇಳುವ ಕೋಡಿಹಳ್ಳಿ ಚಂದ್ರಶೇಖರ್ ಆರೋಪಿಯಾಗಿದ್ದಾರೆ ಯಾರೇ ಆಗಲಿ ಹಸಿರುಶಾಲು ಹಾಕಿ ರೈತ ಚಳುವಳಿಯ ಮುಖವಾಡ ಧರಿಸಿ ರೈತರಿಗೆ ದ್ರೋಹ ಬಗೆಯುವ ಕಾರ್ಯ ನಡೆಸುವುದು ಇಬ್ಬಂದಿತನದ ವರ್ತನೆ ,
ಈ ಬಗ್ಗೆ ಕೋಡಿಹಳ್ಳಿ ಹಸಿರು ಶಾಲು ಹಾಕಿ ದೊಂಬರಾಟ ಆಡದೇ ಆತ್ಮವಿಮರ್ಶೆ ಮಾಡಿಕೊಳ್ಳಬೇಕು ಸಮಗ್ರ ತನಿಖೆಯಾಗಿ ಸತ್ಯ ರಾಜ್ಯದ ಜನರಿಗೆ ಸತ್ಯ ತಿಳಿಯಬೇಕು, ರಿಯಲ್ ಎಸ್ಟೇಟ್ ದಂದೆ ನಡೆಸುವವರು ಹಾಗೂ ದಳ್ಳಾಳಿಗಳು ರಾಜ್ಯದ್ಯಂತ ಹಲವು ಜನ ಹಸಿರು ಶಾಲು ಹಾಕಿ ರೈತ ಮುಖಂಡ ಎಂದು ರೈತರ ಕಣ್ಣಿಗೆ ಮಣ್ಣೆರಚುತ್ತಿದ್ದಾರೆ ರೈತರು ಜಾಗೃತರಾಗಿರಬೇಕು ಎಂದು ರಾಜ್ಯ ರೈತ ಸಂಘಟನೆಗಳ ಒಕ್ಕೂಟ ರಾಜ್ಯ ಕಬ್ಬು ಬೆಳೆಗಾರರ ಸಂಘದ ರಾಜ್ಯ ಅಧ್ಯಕ್ಷ ಕುರುಬೂರು ಶಾಂತಕುಮಾರ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ

ಒಳನಾಡು ಪ್ರದೇಶದ ಸುಮಾರು 28000 ಗ್ರಾಮ ಪಂಚಾಯಿತಿ ಕೆರೆಗಳಲ್ಲಿ ಮೀನು ಮರಿ ಸಾಕುವ ಮೀನುಗಾರರ ಸಹಕಾರ ಸಂಘಗಳ ಸದಸ್ಯ ಜನರನ್ನು ದೂರವಿಟ್ಟು, ಬಹಿರಂಗ ಹರಾಜು ಮೂಲಕ ಬಲಾಢ್ಯರಿಗೆ ಏತ ನೀರಾವರಿ ಕೆರೆಗಳನ್ನು ಮೀನು ಸಾಕಾಣಿಕೆಗಾಗಿ ಬಹಿರಂಗ ಹರಾಜು ಮೂಲಕ ಹಂಚಲು ಮುಂದಾಗಿರುವ ಸರ್ಕಾರದ ಕ್ರಮ ಸರಿಯಲ್ಲ ಸ್ಥಳೀಯ ಮೀನುಮರಿ ಸಾಕಾಣಿಕೆ ಸಹಕಾರ ಸಂಘಗಳಿಗೆ 2014ರ ನಿಯಮದಂತೆ ಸ್ಥಳೀಯ ಸಂಘಗಳಿಗೆ ಆದ್ಯೆತ್ಯ ನೀಡುವ ಕಾರ್ಯ ಮುಂದುವರಿಸಲು ರಾಜ್ಯದ ಒಂದುವರೆ ಲಕ್ಷ ಮೀನುಗಾರರಿಗೆ ರಕ್ಷಣೆಗಾಗಿ ಮೀನುಗಾರಿಕೆ ಸಚಿವರು ಮುಂದಾಗಬೇಕು ನಿರ್ಲಕ್ಷೆ ಮಾಡಿದರೆ ಮೀನು ಕೃಷಿಕರ ಜೊತೆಗೂಡಿ 13ರಂದು ಬೆಂಗಳೂರಿನಲ್ಲಿ ಪ್ರತಿಭಟನೆ ನಡೆಸಬೇಕಾಗುತ್ತದೆ

ರೈತರು ಬ್ಯಾಂಕುಗಳಲ್ಲಿ ಕೃಷಿ ಸಾಲ ಪಡೆಯಲು ಸಿಬಿಲ್ ಸ್ಕೋರ್ ಪರಿಗಣನೆ ಮಾಡುತ್ತಿರುವುದು ಅತಿವೃಷ್ಟಿ ಅನಾವೃಷ್ಟಿ ಬರಗಾಲಕ್ಕೆ ತುತ್ತಾದಾಗ ಸಕಾಲಕ್ಕೆ ಸಾಲ ಮರುಪಾವತಿಸಲು ಸಾಧ್ಯವಾಗುವುದಿಲ್ಲ ಆದ್ದರಿಂದ ಕೂಡಲೇ ನಿಯಮವನ್ನು ರದ್ದುಗೊಳಿಸಬೇಕು, ಸಾಲ ವಸೂಲಿಗಾಗಿ ಬ್ಯಾಂಕ್ಗಳು ನೋಟಿಸ್ ಕಿರುಕುಳ ನೀಡುತ್ತಿದ್ದಾರೆ ಇಲ್ಲದಿದ್ದರೆ ರಾಜ್ಯದ ರೈತರು ರಿಸರ್ವ್ ಬ್ಯಾಂಕ್ ಮುಂದೆ ಬೆಂಗಳೂರಿನಲ್ಲಿ 13ರಂದು ಪ್ರತಿಭಟನೆ ನಡೆಸಬೇಕಾಗುತ್ತದೆ

ಕೇಂದ್ರ ಸರ್ಕಾರ ಗೋಧಿ, ಸಕ್ಕರೆ , ರಫ್ತು ನಿಷೇಧ ಮಾಡುವ ಮೂಲಕ ರೈತರಿಗೆ ಹಾಗೂ ಕಬ್ಬು ಬೆಳೆಗಾರರಿಗೆ ಗಾಯದ ಮೇಲೆ ಬರೆ ಎಳೆಯುತ್ತಿದೆ, ಕೂಡಲೇ ಸಕ್ಕರೆ ರಫ್ತು ನಿರ್ಬಂಧ ರದ್ದುಗೊಳಿಸಲಿ

ಪ್ರಸಕ್ತ ಸಾಲಿನ ಕಬ್ಬಿನ ಎಫ್ ಅರ್ ಪಿ ದರವನ್ನು ಕನಿಷ್ಠ ಟನ್ಗೆ 3500 ನಿಗದಿ ಮಾಡಿ ಜೂನ್ ತಿಂಗಳಲ್ಲಿ ಸಕ್ಕರೆ ಕಾರ್ಖಾನೆಗಳ ಆರಂಭಕ್ಕೆ ಮುಂಜಾಗ್ರತಾ ಕ್ರಮ ಕೈಗೊಳ್ಳಬೇಕು ರಾಜ್ಯದಲ್ಲಿ ಕಬ್ಬು ಪ್ರದೇಶ , ಇಳುವರಿ, ಏರಿಕೆಯಾಗಿರುವ ಕಾರಣ ತುರ್ತು ಕ್ರಮ ಕೈಗೊಳ್ಳಬೇಕು

ರೈತರಿಗೆ ಅನುಕೂಲವಾಗಲಿ ಎಂದು ಕೃಷಿಭೂಮಿ ಸ್ವಯಂ ಭೂಪರಿವರ್ತನೆ ಕಾಯ್ದೆ ಜಾರಿ ತರುತ್ತೇವೆ ಎಂದು ಹೇಳುವ ಕಂದಾಯ ಸಚಿವ ಅಶೋಕ್ ರೈತರ ಹೆಸರಿನಲ್ಲಿ ರಿಯಲ್ ಎಸ್ಟೇಟ್ ಮಾಫಿಯಾದ ಒತ್ತಡಕ್ಕೆ ಮಣಿದಿದ್ದಾರೆ ಈ ಕಾಯ್ದೆ ಜಾರಿಗೆ ಕಂದಾಯ ಸಚಿವರು ತಡೆಹಾಕಬೇಕು ಎಂದು ಒತ್ತಾಯಿಸುತ್ತೇನೆ ಎಂದಿದ್ದಾರೆ.