ಖ್ಯಾತ ಗಾಯಕಿ ವಾಣಿ ಜೈರಾಮ್ ನಿಧನ.

ಚೆನ್ನೈ,ಫೆಬ್ರವರಿ,4,2023(www.justkannada.in): ಚಿತ್ರರಂಗದ ಖ್ಯಾತ ಹಿನ್ನೆಲೆ ಗಾಯಕಿ ವಾಣಿ ಜೈರಾಮ್(77) ನಿಧನರಾಗಿದ್ದಾರೆ.

ತಮಿಳುನಾಡಿನ ಚೆನ್ನೈ ನಿವಾಸದಲ್ಲಿ ವಾಣಿ ಜೈರಾಮ್ ಅನುಮಾನಸ್ಪದವಾಗಿ ಶವವಾಗಿ ಪತ್ತೆಯಾಗಿದ್ದಾರೆ.   ವಾಣಿ ಜೈರಾಮ್ ತಲೆಗೆ ಪೆಟ್ಟು ಬಿದ್ದು ಗಾಯಗೊಂಡಿದ್ದರು. ಎನ್ನಲಾಗಿದೆ.

ವಾಣಿ ಜಯರಾಂ ಮೊನ್ನೆಯಷ್ಟೆ ಪದ್ಮಭೂಷಣ ಪ್ರಶಸ್ತಿಗೆ ಭಾಜನರಾಗಿದ್ದರು. ಕನ್ನಡದಲ್ಲಿ 600ಕ್ಕೂ ಹೆಚ್ಚು ಹಾಡುಗಳಿಗೆ ದನಿಯಾಗಿದ್ದರು. ಕನ್ನಡ ,ತಮಿಳು, ತೆಲುಗು,ಮಲಯಾಳಂ, ಹಿಂದಿ ಭಾಷೆ ಸೇರಿದಂತೆ ಹಲವು ಭಾಷೆಗಳನ್ನ ವಾಣಿ ಜಯರಾಂ ಹಾಡಿದ್ದರು. ಸುಮಾರು 10 ಸಾವಿರಕ್ಕೂ ಹೆಚ್ಚು ಹಾಡುಗಳನ್ನ ಹಾಡಿದ್ದಾರೆ.

Key words: Famous singer- Vani Jairam- passed away-chennai