ಖ್ಯಾತ ನಿರ್ದೇಶಕ, ನಟ ಕೆ. ವಿಶ್ವನಾಥ್ ನಿಧನಕ್ಕೆ ಸಿಎಂ ಬೊಮ್ಮಾಯಿ ಸಂತಾಪ.

ಬೆಂಗಳೂರು,ಫೆಬ್ರವರಿ,3,2023(www.justkannada.in): ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ ಪುರಸ್ಕೃತ ಖ್ಯಾತ ನಿರ್ದೇಶಕ, ನಟ ಕೆ. ವಿಶ್ವನಾಥ್ ನಿಧನಕ್ಕೆ ಸಿಎಂ ಬಸವರಾಜ ಬೊಮ್ಮಾಯಿ ಸಂತಾಪ ಸೂಚಿಸಿದ್ದಾರೆ.

 ಖ್ಯಾತ ನಿರ್ದೇಶಕ,  ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ ಪುರಸ್ಕೃತರು ವಿಶ್ವನಾಥ್ ಅವರು ನಿಧನರಾಗಿದ್ದಾರೆ. ಅವರ ನಿಧನ ಭಾರತೀಯ ಚಿತ್ರರಂಗಕ್ಕೆ ದೊಡ್ಡ ನಷ್ಟ. ವಿಶ್ವನಾಥ್ ಭಾರತೀಯ ಚಿತ್ರರಂಗದಲ್ಲಿ ಅಜರಾಮರು. ಕೆ. ವಿಶ್ವನಾಥ್  ಅವರ ಆತ್ಮಕ್ಕೆ ಶಾಂತಿ ಸಿಗಲಿ. ಅವರ ಕುಟುಂಬಕ್ಕೆ ನೋವು ಭರಿಸುವ ಶಕ್ತಿ ನೀಡಲಿ ಎಂದು ಪ್ರಾರ್ಥಿಸಿದ್ದಾರೆ.

ಈಗ ತೆಲುಗಿನ ಖ್ಯಾತ ನಿರ್ದೇಶಕ, ನಟ ಕೆ. ವಿಶ್ವನಾಥ್ ಅವರು ಹೈದರಾಬಾದ್​ನಲ್ಲಿ ನಿಧನ ಹೊಂದಿದ್ದು,  ಅವರಿಗೆ 92 ವರ್ಷ ವಯಸ್ಸಾಗಿತ್ತು. ವಿಶ್ವನಾಥ್ ಅವರು ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದರು ಎನ್ನಲಾಗಿದೆ .

ತೆಲುಗಿನಲ್ಲಿ ‘ಸ್ವಾತಿ ಮುತ್ಯಂ’, ‘ಶಂಕರಾಭರಣಂ, ‘ಸಾಗರ ಸಂಗಮಮ್​’ ಸೇರಿದಂತೆ ಹಲವು ಸೂಪರ್ ಹಿಟ್​ ಚಿತ್ರಗಳನ್ನು ವಿಶ್ವನಾಥ್ ನೀಡಿದ್ದಾರೆ.

Key words: Famous director- actor – K.Vishwanath-No more- condoles -CM Bommai