ಜೈಲಿನಲ್ಲಿರುವ ನಟ ದರ್ಶನ್ ಭೇಟಿಯಾದ ಕುಟುಂಬಸ್ಥರು

ಬೆಂಗಳೂರು,ಜುಲೈ,1,2024 (www.justkannada.in):  ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜೈಲುಪಾಲಾಗಿರುವ ನಟ ದರ್ಶನ್ ನೋಡಲು ಕುಟುಂಬಸ್ಥರು ಇಂದು ಪರಪ್ಪನ ಅಗ್ರಹಾರಕ್ಕೆ ಭೇಟಿ ನೀಡಿದ್ದಾರೆ.

ನಟ ದರ್ಶನ್ ತಾಯಿ ಮೀನಾ, ತಮ್ಮ ದಿನಕರ್ ತೂಗುದೀಪ, ಪತ್ನಿ ವಿಜಯಲಕ್ಷ್ಮಿ, ಪುತ್ರ ವಿನೀಶ್ ದರ್ಶನ್ ರನ್ನು ನೋಡಲು ಇಂದು ಪರಪ್ಪನ ಅಗ್ರಹಾರಕ್ಕೆ ಆಗಮಿಸಿದ್ದಾರೆ.

ನಟ ದರ್ಶನ್‌ ನೋಡಲು ಕುಟುಂಬಸ್ಥರು ಖಾಸಗಿ ವಾಹನದಲ್ಲಿ ಆಗಮಿಸಿದ್ದು,  ದರ್ಶನ್‌ ಕುಟುಂಬದವರನ್ನು ಮಾಧ್ಯಮದವರ ಕಣ್ಣುತಪ್ಪಿಸಿ ಖಾಸಗಿ ಕಾರಿನಲ್ಲಿ ಹೆಡ್‌ ಕಾನ್ಸ್‌ ಟೇಬಲ್‌ ವೊಬ್ಬರು ಜೈಲಿನೊಳಗೆ ಕರೆದುಕೊಂಡು ಹೋದರು ಎನ್ನಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ನಟ ದರ್ಶನ್ ನ್ಯಾಯಾಂಗ ಬಂಧನದಲ್ಲಿದ್ದಾರೆ.

Key words: Family, members, actor, Darshan, jail