ಪರಿಹಾರಕ್ಕಾಗಿ ಕಾದು ಕಾದು ಬಸವಳಿದ ಕೊರೋನಾ ವಾರಿಯರ್ಸ್‌ ಕುಟುಂಬ: ಅಧಿಕಾರಿಗಳ ವಿರುದ್ಧ ಮೈಸೂರು ಮೇಯರ್ ಬಹಿರಂಗ ಅಸಮಾಧಾನ…

ಮೈಸೂರು,ನವೆಂಬರ್,23,2020(www.justkannada.in): ಕೊರೋನಾ ವಾರಿಯರ್ಸ್‌  ಕುಟುಂಬಕ್ಕೆ ಪರಿಹಾರದ ಚೆಕ್ ವಿತರಣಾ ಕಾರ್ಯಕ್ರಮ ವಿಳಂಬ ಮಾಡಿದ ಹಿನ್ನೆಲೆ ಅಧಿಕಾರಿಗಳ ವಿರುದ್ದ ಮೈಸೂರು ಮಹಾನಗರ ಪಾಲಿಕೆ ಮೇಯರ್ ತಸ್ನೀಂ ಬಹಿರಂಗ ಅಸಮಾಧಾನ ಹೊರ ಹಾಕಿದರು.family-corona-warriors-waiting-relief-mysore-mayor-gainst-officials

ಪಾಲಿಕೆಯ ಜಯ ಚಾಮರಾಜೇಂದ್ರ ಒಡೆಯರ್ ಸಭಾಂಗಣದಲ್ಲಿ ಪರಿಹಾರದ ಚೆಕ್ ವಿತರಣಾ ಕಾರ್ಯಕ್ರಮ ಆಯೋಜಿಸಲಾಗಿತ್ತು. ಕರೋನದಿಂದ ಮೃತಪಟ್ಟ ಪೌರಕಾರ್ಮಿಕ ಎರಡು ಕುಟುಂಬಕ್ಕೆ ತಲಾ 30 ಲಕ್ಷ ಪರಿಹಾರ ಚೆಕ್ ನೀಡುವ ಕಾರ್ಯಕ್ರಮ ಇದಾಗಿತ್ತು. ಆದರೆ ಕಾರ್ಯಕ್ರಮ ವಿಳಂಬವಾದ ಹಿನ್ನೆಲೆ ಪರಿಹಾರ ಹಣ ಸ್ವಿಕಾರಕ್ಕಾಗಿ ಬಂದಿದ್ದ  ಕೊರೋನಾ ವಾರಿಯರ್ಸ್‌ ಕುಟುಂಬ ಕಾದು ಕಾದು ಬಸವಳಿದ ಘಟನೆ ನಡೆಯಿತು.

ಅಧಿಕಾರಿಗಳ ವಿರುದ್ದ ಮೇಯರ್ ತಸ್ನೀಂ ಬಹಿರಂಗ ಅಸಮಾಧಾನ…

ಪರಿಹಾರದ ಚೆಕ್ ವಿತರಣಾ ಕಾರ್ಯಕ್ರಮ ವಿಳಂಬವಾದ ಹಿನ್ನೆಲೆ, ಅಧಿಕಾರಿಗಳು ಪ್ರೋಟೋಕಾಲ್ ಫಾಲೋ ಮಾಡಿಲ್ಲವೆಂದು ಮೇಯರ್ ತಸ್ನೀಂ ಬಹಿರಂಗವಾಗಿ ಅಸಮಾಧಾನ ಹೊರ ಹಾಕಿದರು.

ಕಾರ್ಯಕ್ರಮ ವಿಳಂಬ ಆಗಲು ಅಧಿಕಾರಿಗಳ ನಿರ್ಲಕ್ಷ್ಯ ಕಾರಣ. ಜಿಲ್ಲಾ ಮಟ್ಟದಲ್ಲಿ ಅವಮಾನ ಆಗಿತ್ತು. ಈಗ ಪಾಲಿಕೆಯಲ್ಲಿ ಮೂರನೇ ಭಾರಿ ಆಗಿದೆ. ಅರೋಗ್ಯ ಇಲಾಖೆಯಲ್ಲಿ ಅಧಿಕಾರಿಗಳು ಇದ್ರೂ ಕಾರ್ಯಕ್ರಮದ ಮಾಹಿತಿ ನೀಡಿಲ್ಲ. ನಮಗೆ ಕಂಟ್ರೋಲ್ ರೂಂ ನಿಂದ ಮಾಹಿತಿ ಬರುತ್ತೆ. ಇನ್ನೂ ಮುಂದೆ ಈ ರೀತಿ ಅವಮಾನ ಸಹಿಸಲ್ಲ. ನಿರ್ಲಕ್ಷ್ಯ ತೋರಿದ ಅಧಿಕಾರಿಗಳ ಮೇಲೆ ಕ್ರಮ ಆಗಬೇಕು. ಹೀಗಾಗಿ ನಿರ್ಲಕ್ಷ್ಯ ತೋರಿದ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಬಹಿರಂಗವಾಗಿ ಪಾಲಿಕೆ ಆಯುಕ್ತರಿಗೆ ಮೇಯರ್ ತಸ್ನೀಂ ಸೂಚನೆ ನೀಡಿದರು.

Key words: Family –corona-Warriors – waiting –relief- Mysore Mayor -gainst -officials