ಕಾರು ಸಮೇತ ನೀರಿಗೆ ಹಾರಿ ಆತ್ಮಹತ್ಯೆಗೆ ಯತ್ನಿಸಿದ ಕುಟುಂಬ: ಇಬ್ಬರು ಸಾವು.

ಚಿಕ್ಕಮಗಳೂರು,ಆಗಸ್ಟ್,26,2021(www.justkannada.in): ಒಂದೇ ಕುಟುಂಬದವರು ಕಾರು ಸಮೇತ ನೀರಿಗೆ ಹಾರಿ ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ಚಿಕ್ಕಮಗಳೂರು ಜಿಲ್ಲೆಯಲ್ಲಿ ನಡೆದಿದೆ.

ಜಿಲ್ಲೆಯ ತರೀಕೆರೆ ತಾಲೂಕಿನ ಎಂ.ಸಿ.ಹಳ್ಳಿಯಲ್ಲಿ ಈ ಘಟನೆ ನಡೆದಿದೆ. ವಾಟ್ಸಪ್ ನಲ್ಲಿ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ವಾಯ್ಸ್ ಮೆಸೇಜ್ ಹಾಕಿ ಒಂದೇ ಕುಟುಂಬದ ನಾಲ್ವರು ಆತ್ಮಹತ್ಯೆಗೆ ಯತ್ನಿಸಿದ್ದಾರೆ.  ಇವರಲ್ಲಿ ಪತಿ ಮಂಜು ಹಾಗೂ ಸುನಂದಮ್ಮ ಎಂಬುವರು ಕಾರಿನ ಸಮೇತ ನೀರುಪಾಲಾಗಿದ್ದಾರೆ. ಮಂಜು ಪತ್ನಿ ನೀತು ಹಾಗೂ ಮಗ ಧ್ಯಾನ್ ಅಪಾಯದಿಂದ ಪಾರಾಗಿದ್ದಾರೆ ಎನ್ನಲಾಗಿದೆ.

ಇವರೆಲ್ಲರೂ ಭದ್ರಾವತಿ ತಾಲೂಕಿನ ಜೆ.ಡಿ.ಕಟ್ಟೆಯ ನಿವಾಸಿಗಳಾಗಿದ್ದು, ಸ್ಥಳಕ್ಕೆ ತರೀಕೆರೆ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ  ನಡೆಸಿದ್ದಾರೆ.

Key words: Family –attempting- suicide – jumping – water-chikkamagalore