ಹೆಚ್.ಡಿ ಕುಮಾರಸ್ವಾಮಿ ಎಡವಟ್ಟಿಗೆ ಮೈತ್ರಿ ಸರ್ಕಾರ ಪತನ- ಮಾಜಿ ಸಚಿವ ಜಮೀರ್ ಅಹ್ಮದ್ ಖಾನ್ ಕಿಡಿ

ಬೆಂಗಳೂರು,ಆ,23,2019(www.justkannada.in):  ಹೆಚ್.ಡಿ ಕುಮಾರಸ್ವಾಮಿ ಎಡವಟ್ಟಿನಿಂದ ಮೈತ್ರಿ ಸರ್ಕಾರ ಪತನವಾಗಿದೆ ವಿನಃ ಸಿದ್ಧರಾಮಯ್ಯ ಅವರಿಂದಲ್ಲ ಎಂದು ಮಾಜಿ ಸಚಿವ ಜಮೀರ್ ಅಹ್ಮದ್ ಖಾನ್ ಹೇಳಿದರು.

ರಾಜ್ಯ ಸಮ್ಮಿಶ್ರ ಸರ್ಕಾರ ಪತನಕ್ಕೆ ಸಿದ್ಧರಾಮಯ್ಯ ಕಾರಣ ಎಂಬ ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡರ ಆರೋಪಕ್ಕೆ ಪ್ರತಿಕ್ರಿಯಿಸಿದ ಜಮೀರ್ ಅಹ್ಮದ್ ಖಾನ್, ಎಲ್ಲಾ ಶಾಸಕರನ್ನ ವಿಶ್ವಾಸಕ್ಕೆ ತೆಗೆದುಕೊಂಡು ಸರ್ಕಾರ ನಡೆಸೋಣ ಎಂದು  ಅಂದು ನಾನು ತಾಜ್ ವೆಸ್ಟೆಂಡ್ ಹೋಟೆಲ್ ಗೆ ಹೋದಾಗ ಹೆಚ್.ಡಿ ಕುಮಾರಸ್ವಾಮಿಗೆ ಹೇಳಿದ್ದೆ. ಅದರೆ ಅವರು ಕಾಂಗ್ರೆಸ್ ಶಾಸಕರನ್ನ ವಿಶ್ವಾಸಕ್ಕೆ ತೆಗೆದುಕೊಳ್ಳಲಿಲ್ಲ. ಕುಮಾರಸ್ವಾಮಿ ಅವರು ಮಾಡಿದ ತಪ್ಪಿಗೆ ಸಮ್ಮಿಶ್ರ ಸರ್ಕಾರ ಪತನವಾಯಿತು ಎಂದು ಆರೋಪಿಸಿದರು.

ಮಾಜಿ ಪ್ರಧಾನಿ ದೇವೇಗೌಡರು ಲಾಭವಿಲ್ಲದೆ ಏನನ್ನೂ  ಮಾತನಾಡಲ್ಲ. ಮಾಜಿ ಸಿಎಂ ಸಿದ್ದರಾಮಯ್ಯ ಒಬ್ಬ ಸ್ಟ್ಯಾಂಡರ್ಡ್ ರಾಜಕಾರಣಿ, ಅವರು ಕೀಳುಮಟ್ಟದ ರಾಜಕಾರಣ ಮಾಡುವವರಲ್ಲ ಸಿದ್ಧರಾಮಯ್ಯ ಕಣ್ಣೀರು ಹಾಕಿಸುವ ವ್ಯಕ್ತಿ ಅಲ್ಲ ಎಂದು ಜಮೀರ್ ಅಹ್ಮದ್ ಖಾನ್ ತಿಳಿಸಿದರು.

Key words: Fall -Allied Government – HD Kumaraswamy- Former Minister -Zamir Ahmed Khan