“ನಂಜುಂಡೇಶ್ವರನ ಜಾತ್ರೆಗೆ ಅವಕಾಶ ಕೊಡಿ” : ಭಕ್ತರಿಂದ ಸಚಿವ ಎಸ್.ಟಿ.ಸೋಮಕಶೇಖರ್ ಗೆ ಮನವಿ 

ಮೈಸೂರು,ಮಾರ್ಚ್,19,2021(www.justkannada.in) : ಕಳೆದ ವರ್ಷವೂ ನಂಜುಂಡೇಶ್ವರನ ಜಾತ್ರೆ ನಡೆದಿಲ್ಲ. ಇದು ಎಷ್ಟೋ ಜನರ ಭಾವನೆಗೆ ಧಕ್ಕೆಯಾಗಿದೆ. ಹೀಗಾಗಿ, ಈ ಬಾರಿ ನಂಜುಂಡೇಶ್ವರನ ಜಾತ್ರೆಗೆ ಅವಕಾಶ ಕೊಡಿ ಎಂದು ನಂಜುಂಡೇಶ್ವರನ ಭಕ್ತರು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್‌ಗೆ ಮನವಿ ಮಾಡಿದ್ದಾರೆ. jkಜಿಲ್ಲಾ ಪಂಚಾಯತ್ ನಲ್ಲಿ ಜಿಲ್ಲಾ ಉಸ್ತುವಾರಿ ಸಚಿವರನ್ನು ಭೇಟಿ ಮಾಡಿದ ಭಕ್ತರು, ಈಗಾಗಲೇ ಈ ಬಾರಿ ಜಾತ್ರೆಗಾಗಿ ಎಲ್ಲ ರೀತಿಯ ಸಿದ್ಧತೆ ನಡೆಸಲಾಗಿದೆ. ರಥೋತ್ಸವ ರದ್ದು ಆದೇಶ ನೋವುಂಟು ಮಾಡಿದೆ. ಧಾರ್ಮಿಕ ಕಾರ್ಯಗಳು ನಡೆಯದಿದ್ದಲ್ಲಿ ತಾಲೂಕಿಗೆ ಕೆಡುಕಾಗುವ ಆತಂಕವಿದೆ. ಹೀಗಾಗಿ, ನಂಜುಂಡೇಶ್ವರನ ಜಾತ್ರೆಗೆ ಅನುಮತಿ ನೀಡುವಂತೆ ವಿನಂತಿಸಿದರು. ಕೊರೊನಾ ಬಗ್ಗೆ ನಮಗೂ ಅರಿವಿದೆ. ಕೋವಿಡ್ ನಿಯಮ ಪಾಲಿಸಿ ನಂಜುಂಡೇಶ್ವರನ ಜಾತ್ರೆ ಆಚರಿಸಲು ಅನುಮತಿ ನೀಡಿ. ಕೊರೊನಾ ಮುನ್ನೆಚ್ಚರಿಕಾ ಕ್ರಮ ವಹಿಸಿ ಜಾತ್ರೆ ನಡೆಸುತ್ತೇವೆ ಎಂದು ತಿಳಿಸಿದರು.

key words : fair-Nanjundeshwar-Give-chance-Devotees-appeal-minister-S.T. Somakashekhar