ನಾನು ಸಿಎಂ ಆಗುತ್ತೇನೆ ಎನ್ನುವುದು ಕುಮಾರಸ್ವಾಮಿಯವರ ಭ್ರಮೆ : ಸಚಿವ ನಾರಾಯಣಗೌಡ

ಮಂಡ್ಯ,ಡಿಸೆಂಬರ್,14,2020(www.justkannada.in) : ನಾನು ಸಿಎಂ ಆಗುತ್ತೇನೆ. ನಿಮ್ಮನ್ನ ಮಂತ್ರಿ ಮಾಡ್ತೇನೆ ಅಂದಿದ್ದಾರೆ. ಹೀಗೆ, ಅಂದುಕೊಂಡರೆ ಅದು ಕುಮಾರಸ್ವಾಮಿಯವರ ಭ್ರಮೆ. ವಿಲೀನ ವಿಚಾರ ಮೇಲ್ಮಟ್ಟಕ್ಕೆ ಬಿಟ್ಟಿದ್ದು, ಬಿಜೆಪಿಗೆ ಇದರ ಅಗತ್ಯವಿಲ್ಲ ಎಂದು ಪೌರಾಡಳಿತ ಸಚಿವ ನಾರಾಯಣಗೌಡ ಕಿಡಿಕಾರಿದ್ದಾರೆ.

logo-justkannada-mysore

ಬಿಜೆಪಿ ಜತೆ ಜೆಡಿಎಸ್ ಪಕ್ಷದ ವಿಲೀನ ವದಂತಿ ವಿಚಾರಕ್ಕೆ ಸಂಬಂಧಿಸಿ ಮಾತನಾಡಿದ ಅವರು, ಕುಮಾರಸ್ವಾಮಿ ಈ ಬಗ್ಗೆ ಮಂಡ್ಯದಲ್ಲಿ ನಾಲ್ಕು ಜನರ ಜೊತೆ ಮಾತನಾಡಿದ್ದಾರೆ. ವಿಲೀನ ವಿಚಾರ ಮೇಲ್ಮಟ್ಟಕ್ಕೆ ಬಿಟ್ಟಿದ್ದು, ಬಿಜೆಪಿಗೆ ಇದರ ಅಗತ್ಯವಿಲ್ಲ. ಬಿಜೆಪಿಗೆ 120 ಸೀಟ್ ಗಳು ಇವೆ. ಯಡಿಯೂರಪ್ಪರನ್ನ ಅವರು ಟಚ್ ಸಹ ಮಾಡಲು ಸಾಧ್ಯವಿಲ್ಲ ಎಂದು ಟಾಂಗ್ ನೀಡಿದ್ದಾರೆ.

ಇನ್ನು ಈ ಹಿಂದೆ ಕುಮಾರಸ್ವಾಮಿ ನಮಗೆ ಸಾಕಷ್ಟು ನೋವು ಕೊಟ್ಟಿದ್ದಾರೆ. ನಮಗೆ ಚಪ್ಪಲಿಯಲ್ಲೆಲ್ಲ ಹೊಡೆಸಿದ್ದಾರೆ. ಅವರು ನಾನೀಗ ಸಿಎಂ ಆಗ್ತೀನಿ ಅಂದುಕೊಂಡರೆ ಅದು ಅವರ ಭ್ರಮೆ. ಆ ಭ್ರಮೆಯಿಂದ ಕುಮಾರಸ್ವಾಮಿ ಮೊದಲು ಹೊರಬರಬೇಕು ಎಂದು ವ್ಯಂಗ್ಯವಾಗಿ ನುಡಿದಿದ್ದಾರೆ.

ಅವರಿಗೆ ಪವರ್ ಇದ್ದಾಗ ಏನೂ ಮಾಡಲಿಲ್ಲ. ಈಗ ಪವರ್ ಇಲ್ಲ. ಆದ್ರೂ ಅದು, ಇದು ಅಂತಾ ಮಾತಾಡುತ್ತಾರೆ. ಜೆಡಿಎಸ್ ಹೆಸರಿನಲ್ಲಿ ನಿಂತ್ರೆ, ಕೆ.ಆರ್.ಪೇಟೆಯಲ್ಲಿ ಒಂದು ಚಿಕ್ಕ ಮಗು ಕೂಡ ಗೆಲ್ಲುತ್ತೆ ಅಂತಿದ್ರು. ಈಗ ಅವರ ಮಗ ಸಹ ಗೆಲ್ಲಲು ಸಾಧ್ಯವಾಗಿಲ್ಲ. ಆ ನೋವು ಅವರಿಗೆ ಇದೆ ಎಂದು ವಾಗ್ದಾಳಿ ನಡೆಸಿದರು.

 fact-that-I-become-CM-Kumaraswamy's-delusion-Minister-Narayana Gowda

key words : fact-that-I-become-CM-Kumaraswamy’s-delusion-
Minister-Narayana Gowda