ಪ್ರಧಾನಿ ಮೋದಿ ರಿಪೋರ್ಟ್ ಕಾರ್ಡ್ ಆಧಾರದಲ್ಲಿ ಚುನಾವಣೆ ಎದುರಿಸುತ್ತೇವೆ- ಬಿಜೆಪಿ ರಾಷ್ಟ್ರಾಧ್ಯಕ್ಷ ಜೆ.ಪಿ ನಡ್ಡಾ.

ತುಮಕೂರು,ಜನವರಿ,5,2023(www.justkannada.in):  ಕರ್ನಾಟಕ ರಾಜ್ಯ ವಿಧಾನಸಭೆ ಚುನಾವಣೆ ಎದುರಿಸಲು ಬಿಜೆಪಿ ಸಜ್ಜಾಗುತ್ತಿದ್ದು, ಪ್ರಧಾನಿ ಮೋದಿ ರಿಪೋರ್ಟ್ ಕಾರ್ಡ್ ಆಧಾರದಲ್ಲಿ ಚುನಾವಣೆ ಎದುರಿಸುತ್ತೇವೆ ಎಂದು ಬಿಜೆಪಿ ರಾಷ್ಟ್ರಾಧ್ಯಕ್ಷ ಜೆ.ಪಿ ನಡ್ಡಾ ನೀಡಿದ್ದಾರೆ.

ತುಮಕೂರು ಮಧುಗಿರಿಯಲ್ಲಿ ಇಂದು ಮಾತನಾಡಿದ ಜೆ.ಪಿ ನಡ್ಡಾ, ಕಾಂಗ್ರೆಸ್ ಪಕ್ಷ ವೋಟ್ ಬ್ಯಾಂಕ್ ರಾಜಕಾರಣ ಮಾಡುತ್ತಿತ್ತು.  ಪ್ರಧಾನಿ ಮೋದಿ ದೇಶದ ರಾಜಕೀಯ ಸಂಸ್ಕೃತಿ ಬದಲಿಸಿದ್ದಾರೆ. ಕಾಂಗ್ರೆಸ್ ಪಕ್ಷ ಜಾತಿ ಕುಟುಂಬ ರಾಜಕಾರಣ ಮಾಡುತ್ತಿತ್ತು. ಮೋದಿ ರಿಪೋರ್ಟ್ ಕಾರ್ಡ್ ರಾಜಕೀಯ ಆರಂಭಿಸಿದರು.  ರಾಜ್ಯದಲ್ಲಿ ಮೋದಿ ರಿಪೋರ್ಟ್ ಕಾರ್ಡ್ ನಡಿ ಚುನಾವಣೆ ಎದುರಿಸುತ್ತೇವೆ. ನಮ್ಮ ರಿಪೋರ್ಟ್ ಕಾರ್ಡ್ ರೆಡಿ ಇದೆ ಎಂದು ತಿಳಿಸಿದರು.

Key words: face- elections – basis – Prime Minister -Modi’s- report card-BJP- National President -JP Nadda.