ಸಹಕಾರ ಮ್ಯಾನೇಜ್ ಮೆಂಟ್ ಡಿಪ್ಲೋಮಾ, ಹಾಸ್ಟೇಲ್ ಪ್ರವೇಶಕ್ಕೆ ಅರ್ಜಿ ಸಲ್ಲಿಕೆ ಅವಧಿ ವಿಸ್ತರಣೆ

ಬೆಂಗಳೂರು ಡಿಸೆಂಬರ್,17,2025 (www.justkannada.in) : ಕರ್ನಾಟಕ ಇನ್ಸ್ಟಿಟ್ಯೂಟ್ ಆಫ್ ಕೋ ಆಪರೇಟಿವ್ ಮ್ಯಾನೇಜ್ಮೆಂಟ್ ಬೆಂಗಳೂರು ಸಹಕಾರ ತರಬೇತಿ ಸಂಸ್ಥೆಯು 2026 ರ ಜನವರಿಯಿಂದ 6 ತಿಂಗಳ ಅವಧಿಯ ರೆಗ್ಯುಲರ್ ಡಿಪ್ಲೋಮಾ ಇನ್ ಕೋ ಆಪರೇಟಿವ್ ಮ್ಯಾನೇಜ್ಮೆಂಟ್ ತರಬೇತಿಯನ್ನು ಪ್ರಾರಂಭಿಸಲಿದೆ.

ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ ,ತುಮಕೂರು ಚಿಕ್ಕಬಳ್ಳಾಪುರ, ಕೋಲಾರ ಹಾಗೂ ರಾಮನಗರ ಜಿಲ್ಲೆಗಳ ಆಸಕ್ತ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಕನಿಷ್ಠ ಎಸ್ ಎಸ್ ಎಲ್ ಸಿ  ಹಾಗೂ ಮೇಲ್ಪಟ್ಟ ವಿದ್ಯಾರ್ಹತೆಯುಳ್ಳ  ಎಲ್ಲಾ ಅಭ್ಯರ್ಥಿಗಳು ಪ್ರವೇಶ ಪಡೆಯಲು ಅವಕಾಶವಿರುತ್ತದೆ . ಪ್ರವೇಶ ಪಡೆಯುವ ಎಲ್ಲಾ ಸಾಮಾನ್ಯ ವರ್ಗಗಳ ಅಭ್ಯರ್ಥಿಗಳಿಗೆ ಮಾಹೆಯಾನ ರೂ 500  ಹಾಗೂ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಅಭ್ಯರ್ಥಿಗಳಿಗೆ ಮಾಸಿಕ ರೂ. 600 ಶಿಷ್ಯವೇತನ ನೀಡಲಾಗುವುದು.

ಪುರುಷರಿಗೆ ವಸತಿ (ಹಾಸ್ಟೇಲ್) ಸೌಲಭ್ಯ ಲಭ್ಯವಿರುತ್ತದೆ. ಅರ್ಜಿ ಸಲ್ಲಿಸಲು ಡಿಸೆಂಬರ್ 31 ಕೊನೆಯ ದಿನವಾಗಿದೆ.

ಅರ್ಜಿ ದೊರೆಯುವ ಸ್ಥಳ ಕೆ ಐ ಸಿ ಎಂ. 1/3, ಎರಡನೇ ಮಹಡಿ, ಮೂರನೇ ಮುಖ್ಯರಸ್ತೆ, ಕನ್ನಡ ಸಾಹಿತ್ಯ ಪರಿಷತ್ ಹಿಂಭಾಗ ಮಕ್ಕಳ ಕೂಟ ಹತ್ತಿರ, ಚಾಮರಾಜಪೇಟೆ, ಬೆಂಗಳೂರು 560018  ಹೆಚ್ಚಿನ ಮಾಹಿತಿಗಾಗಿ

ದೂರವಾಣಿ ಸಂಖ್ಯೆ: 080-35541407, 9449007661, 9036256781 ಸಂಪರ್ಕಿಸಬಹುದು ಎಂದು ಪ್ರಕಟಣೆ ತಿಳಿಸಿದೆ.

Key words: Extension, application, Cooperative Management Diploma, Hostel Admission