Wednesday, September 30, 2026

BDA Apartments

ಜ.28 ರಂದು ಶೋಷಿತರ ಜಾಗೃತಿ ಸಮಾವೇಶ: ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಯಶಸ್ವಿ...
Home Front Page ಜ.28 ರಂದು ಶೋಷಿತರ ಜಾಗೃತಿ ಸಮಾವೇಶ: ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಯಶಸ್ವಿಗೊಳಿಸಲು ಮನವಿ.

ಜ.28 ರಂದು ಶೋಷಿತರ ಜಾಗೃತಿ ಸಮಾವೇಶ: ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಯಶಸ್ವಿಗೊಳಿಸಲು ಮನವಿ.

ಮೈಸೂರು,ಜನವರಿ,13,2024(www.justkannada.in): ಕರ್ನಾಟಕ ಶೋಷಿತ ಸಮುದಾಯಗಳ ಮಹಾ ಒಕ್ಕೂಟ ಮತ್ತು ಕರ್ನಾಟಕ ರಾಜ್ಯ ಹಿಂದುಳಿದ ಜಾತಿಗಳ ಒಕ್ಕೂಟ ಆಯೋಜಿಸಿದ್ದ ಶೋಷಿತರ ಜಾಗೃತಿ ಸಮಾವೇಶದ ಪೂರ್ವಭಾವಿ ಸಭೆ ಯಶಸ್ವಿಯಾಗಿ ನಡೆಯಿತು.

ಮೈಸೂರು ನಗರದ ಸಿದ್ದಾರ್ಥ ನಗರದಲ್ಲಿರುವ ಕನಕ ಸಮುದಾಯ ಭವನದಲ್ಲಿ ನಡೆದ ಸಭೆಯಲ್ಲಿ ಹಲವು ವಿಚಾರಗಳ ಬಗ್ಗೆ ಚರ್ಚಿಸಲಾಯಿತು. ಇದೇ ಜ.28 ರಂದು ಭಾನುವಾರ ಚಿತ್ರದುರ್ಗದಲ್ಲಿ ಏರ್ಪಡಿಸಿರುವ ಶೋಷಿತರ ಜಾಗೃತಿ ಸಮಾವೇಶದ ಧ್ಯೇಯೋದ್ದೇಶ ಬಗ್ಗೆ ಮತ್ತು ಜಿಲ್ಲೆಯಿಂದ ಹೆಚ್ಚಿನ ಸಂಖ್ಯೆಯಲ್ಲಿ ಸಮಾವೇಶದಲ್ಲಿ ಭಾಗವಹಿಸಿ ಯಶಸ್ವಿಗೊಳಿಸಬೇಕೆಂದು ಮನವಿ ಮಾಡಿದರು.

ಕರ್ನಾಟಕ ಪ್ರದೇಶ ಕುರುಬರ ಸಂಘದ ಮಾಜಿ ಅಧ್ಯಕ್ಷ ಬಿ. ಸುಬ್ರಹ್ಮಣ್ಯ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಸಭೆಯ ಅಧ್ಯಕ್ಷತೆಯನ್ನುರಾಮಚಂದ್ರಪ್ಪ ವಹಿಸಿದ್ದರು.ಜ.28 ರಂದು ಶೋಷಿತರ ಜಾಗೃತಿ ಸಮಾವೇಶ mysore-chitradurga mysore chitradurga

ಸಭೆಯಲ್ಲಿ ಪ್ರೊ.ಮಹೇಶ್ ಚಂದ್ರ ಗುರು, ಮಾಜಿ ಶಾಸಕ ಎಂ. ಕೆ ಸೋಮಶೇಖರ್, ಮಾಜಿ ಮೇಯರ್ ಪುರುಷೋತ್ತಮ್, ನಾರಾಯಣ್, ಪುಷ್ಪಲತಾ ಚಿಕ್ಕಣ್ಣ, ಮುಖಂಡರುಗಳಾದ ಮಾವಳ್ಳಿ ಶಂಕರ್, ಆರೀಫ್ , ಮೂರ್ತಿ, ರಾಮಸ್ವಾಮಿ, ಶಿವರಾಮ, ಶಿವಣ್ಣ, ರವಿ ರಾಮಚಂದ್ರಪ್ಪ, ರಾಮು, ಕೃಷ್ಣಮೂರ್ತಿ, ರಾಮಕೃಷ್ಣ, ಮತ್ತು ಮೈಸೂರು ಜಿಲ್ಲೆಯ ಎಲ್ಲಾ ತಾಲೂಕಿನ ಶೋಷಿತ ಸಮುದಾಯಗಳು ಹಾಲಿ ಮತ್ತು ಮಾಜಿ ಚುನಾಯಿತ ಪ್ರತಿನಿಧಿಗಳು, ಮುಂಚೂಣಿ ಘಟಕದ ಅಧ್ಯಕ್ಷರು, ಮುಖಂಡರುಗಳು ಹಾಗೂ ಇನ್ನಿತರರು ಭಾಗವಹಿಸಿದ್ದರು.

Key words: Exploited-Awareness- Conference – Jan 28-mysore