“ಗರಿಗೆದರಿದ ಪಾಲಿಕೆ ಮೇಯರ್, ಉಪಮೇಯರ್ ಚುನಾವಣೆ”

ಮೈಸೂರು,ಫೆಬ್ರವರಿ,10,2021(www.justkannada.in) : ಪಾಲಿಕೆ ಮೇಯರ್, ಉಪಮೇಯರ್ ಚುನಾವಣೆ ಸಂಬಂಧ ಮೀಸಲಾತಿ ಪಟ್ಟಿ ವಿಳಂಬವಾಗುತ್ತಿದೆ. ಆದರೆ, ಅಧಿಕಾರ ಹಿಡಿಯಲು ಬಿಜೆಪಿ-ಜೆಡಿಎಸ್ ಒಂದಾಗಿದೆ?, ಬಿಜೆಪಿ ಜೊತೆಗಿನ ಮೈತ್ರಿ ಬಗ್ಗೆ ಜೆಡಿಎಸ್ ನಲ್ಲಿ ಒಮ್ಮತ ಮೂಡದ ಕಾರಣ ಜೆಡಿಎಸ್ ನಲ್ಲಿ ಎರಡು ಬಣವಾಗುವ ಸಾಧ್ಯತೆಯಿದೆ ಎನ್ನಲಾಗುತ್ತಿದೆ. jk

ಜೆಡಿಎಸ್ ಅಲ್ಪಸಂಖ್ಯಾತ ಸದಸ್ಯರು ಬಿಜೆಪಿ ಜೊತೆಗಿನ ಮೈತ್ರಿಗೆ ಒಲ್ಲದ ಕಾರಣ, ಜೆಡಿಎಸ್ ಸದಸ್ಯರನ್ನ ತಮ್ಮತ್ತ ಸೆಳೆಯಲು ಕಾಂಗ್ರೆಸ್ ಪ್ಲಾನ್ ಮಾಡಿದೆ. ಜೆಡಿಎಸ್ ಪಕ್ಷದಲ್ಲಿನ ಭಿನ್ನಾಭಿಪ್ರಾಯಗಳನ್ನು ಹೈಜಾಕ್ ಮಾಡಲು ಕೈ ನಾಯಕರ ತಂತ್ರ ರೂಪಿಸಿದ್ದು, ಮೈತ್ರಿ ಮುರಿದರು ಅಧಿಕಾರ ಹಿಡಿಯಲು ಕಾಂಗ್ರೆಸ್ ಕಸರತ್ತು ನಡೆಸುತ್ತಿದೆ ಎಂದು ತಿಳಿದು ಬಂದಿದೆ.Expedited-Election-Mayor-Deputy-Mayor 

ಮೈಸೂರು ಭಾಗದ ನಾಯಕರಿಗೆ ಪ್ರತಿಷ್ಠೆಯಾಗಿರುವ ಮೈಸೂರು ಮಹಾನಗರ ಪಾಲಿಕೆ ಮೇಯರ್ ಉಪಮೇಯರ್ ಚುನಾವಣೆಯು ತೀವ್ರ ಕುತೂಹಲ ಮುಡಿಸುತ್ತಿದೆ.

key words : Expedited-Election-Mayor-Deputy-Mayor