ಸಚಿವಾಲಯದ ಸಿಬ್ಬಂದಿಗೆ ಜೂ.13ರವರೆಗೆ ಹಾಜರಾತಿ ವಿನಾಯಿತಿ: ರಾಜ್ಯ ಸರಕಾರದ ಆದೇಶ

ಬೆಂಗಳೂರು, ಜೂನ್ 08, 2021 (www.justkannada.in): ಜೂನ್ 13ರವರೆಗೆ ಸಚಿವಾಲಯದ ಎಲ್ಲಾ ಅಧಿಕಾರಿ, ನೌಕರರಿಗೆ ಕಚೇರಿ ಹಾಜರಾತಿಯಿಂದ ವಿನಾಯ್ತಿ ನೀಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.

ಲಾಕ್ ಡೌನ್ ಹಿನ್ನಲೆಯಲ್ಲಿ ಸಚಿವಾಲಯದ ಎಲ್ಲಾ ಅಧಿಕಾರಿ, ನೌಕರರು, ಸಿಬ್ಬಂದಿಗಳಿಗೆ ಜೂನ್.13ರವರೆಗೆ ಕಚೇರಿ ಹಾಜರಾತಿಯಿಂದ ವಿನಾಯ್ತಿ ನೀಡಿ ಸರ್ಕಾರ ಆದೇಶಿಸಿದೆ.

ಈ ಸಂಬಂಧ ಕರ್ನಾಟಕ ವಿಧಾನಸಭೆ ಸಚಿವಾಲಯದ ಕಾರ್ಯದರ್ಶಿ ಎಂ.ಕೆ.ವಿಶಾಲಾಕ್ಷಿ ಸುತ್ತೋಲೆ ಹೊರಡಿಸಿದ್ದಾರೆ.

ದಿನಾಂಕ 06-06-2021ರವರೆಗೆ ಸಚಿವಾಲಯದ ಅಧಿಕಾರಿ, ನೌಕರರಿಗೆ ಹಾಜರಾತಿಯಿಂದ ವಿನಾಯ್ತಿಯನ್ನು ಜೂನ್.6ರವರೆಗೆ ನೀಡಲಾಗಿತ್ತು. ಆದರೇ ಸರ್ಕಾರ ದಿನಾಂಕ 14-06-2021ರ ಬೆಳಿಗ್ಗೆ 6 ಗಂಟೆಯವರಿಗೆ ಲಾಕ್ ಡೌನ್ ಜಾರಿಗೊಳಿಸಿ ಆದೇಶ ಹೊರಡಿಸಲಾಗಿದೆ.