ಬೆಂಗಳೂರು,ಫೆಬ್ರವರಿ,4,2026 (www.justkannada.in): ಅಬಕಾರಿ ಇಲಾಖೆಯಲ್ಲಿ 6 ಸಾವಿರ ಕೋಟಿ ರೂ. ಅಕ್ರಮವಾಗಿದೆ. ನಾವು ಅಧಿಕಾರಿಗಳ ಆಡಿಯೋ ಸೇರಿ 5 ಸಾಕ್ಷ್ಯ ಕೊಟ್ಟಿದ್ದೇವೆ ಎಂದು ವಿಪಕ್ಷ ನಾಯಕ ಆರ್.ಅಶೋಕ್ ನುಡಿದರು.
ಇಂದು ವಿಧಾನಸಭೆಯಲ್ಲಿ ಮಾತನಾಡಿದ ಆರ್.ಅಶೋಕ್, ಸಚಿವ ಆರ್.ಬಿ ತಿಮ್ಮಾಪುರ ರಾಜೀನಾಮೆ ನೀಢಬೇಕು. ಈ ಹಿಂದೆ ಕೆ.ಜೆ ಜಾರ್ಜ್ ರಾಜೀನಾಮೆ ಕೊಟ್ಟು ಬಳಿಕ ಸಚಿವರಾಗಲಿಲ್ಲವೇ? ಕೆಎಸ್ ಈಶ್ವರಪ್ಪ ರಾಜೀನಾಮೆ ಕೊಡಲಿಲ್ಲವೇ? ಎಂದು ಪ್ರಶ್ನಿಸಿದರು.
ಅಸ್ಸಾಂಗೆ ಡಿಕೆ ಶಿವಕುಮಾರ್ ಉಸ್ತುವಾರಿ, ಕೇರಳಾಗೆ ಕೆ.ಜೆ ಜಾರ್ಜ್ ಉಸ್ತುವಾರಿ. ಆ ರಾಜ್ಯಗಳಿಗೆ ಕರ್ನಾಟಕದ ಹಣ ಹೋಗುತ್ತಿದೆ. ಕಾಂಗ್ರೆಸ್ ಪಕ್ಷ ಕರ್ನಾಟಕವನ್ನ ಕೇವಲ ಎಟಿಎಂ ಮಾಡಿಕೊಂಡಿಲ್ಲ ರಿಸರ್ವ್ ಬ್ಯಾಂಕ್ ಮಾಡಿಕೊಂಡಿದ್ದಾರೆ. ಅಬಕಾರಿ ಇಲಾಖೆಯಲ್ಲಿ ಭ್ರಷ್ಟಾಚಾರ ಆಗಿರೋದು ಸತ್ಯ ಸತ್ಯ ಎಂದು ಆರೋಪಿಸಿದರು.
ಈ ವೇಳೆ ಮಧ್ಯ ಪ್ರವೇಶಿಸಿದ ಶಾಸಕ ಶಿವಲಿಂಗೇಗೌಡ, ಯಾವನೋ ಅಸೋಸಿಯೇಷನ್ ಅವನ ಮಾತು ಕೇಳುತ್ತೀರಾ? 6 ಸಾವಿರ ಕೋಟಿ ರೂಗೆ ಸಾಕ್ಷಿ ಕೊಡಿ ಎಂದು ಟಾಂಗ್ ಕೊಟ್ಟರು.
Key words: illegal, Excise Department, evidence, R. Ashok







