ಯಡಿಯೂರಪ್ಪನವರೇ ಮಾತಿಗೆ ತಪ್ಪದ ಮಗನಾಗಿ…. ಸಿಎಂ ಗುಣಗಾನ ಮಾಡಿ ಮಾಜಿ ಸಚಿವ ಎಚ್.ವಿಶ್ವನಾಥ್

ಮೈಸೂರು, ಜೂನ್ 28, 2020 (www.justkannada.in): ಈ‌ ನಾಡಿನಲ್ಲಿ ನಾಲಿಗೆ ಮೇಲೆ ನಿಂತ ನಾಯಕ ಯಡಿಯೂರಪ್ಪ‌. ಮಾತಿಗೆ ತಪ್ಪದ ಮಗ ಯಡಿಯೂರಪ್ಪ. ಕೊಟ್ಟ ಮಾತನ್ನ ಉಳಿಸಿಕೊಳ್ಳುವ ವ್ಯಕ್ತಿ ಯಡಿಯೂರಪ್ಪ ಎಂದು ಮಾಜಿ ಸಚಿವ ಎಚ್.ವಿಶ್ವನಾಥ್ ಗುಣಗಾನ ಮಾಡಿದರು.

ಮೈಸೂರಿನಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಮಾತಿನ ಮೇಲೆ ನಿಲ್ಲೋರು ನಿವೊಬ್ಬರೆ. ಈ‌ ಮಾತಿಗೆ ನೀವು ಅಪವಾದ ಆಗಬೇಡಿ. ನನಗೆ ಸಚಿವ ಸ್ಥಾನ ಕೊಟ್ಟೆ ಕೊಡಬೇಕು ಅಂತ ಹೇಳ್ತಿಲ್ಲ. ಕೊಡೋದು ನಿಮಗೆ ಬಿಟ್ಟ ವಿಚಾರ.
ಆದರೆ ನನ್ನ ಅನುಭವ ಬಳಸಿಕೊಳ್ಳಿ ಎಂದು ಕೇಳುತ್ತಿದ್ದೇನೆ ಎಂದು ಹೇಳಿದರು.

ದೇಶದ ರಾಜಕಾರಣ ನಡೆಯೋದೆ ಭಾವನೆ ಮತ್ತು ನಂಬಿಕೆ ಮೇಲೆ. ಇದು ಎರಡು ಮುಗಿದು ಹೋದರೆ ರಾಜಕಾರಣ ಇರೋದಿಲ್ಲ. ಜನ ನಾಯಕರು ಈ ಭಾವನೆ ಮತ್ತು ನಂಬಿಕೆಯನ್ನ ಉಳಿಸಿಕೊಳ್ಳಬೇಕಿದೆ. ಯಡಿಯೂರಪ್ಪನವರೇ ನೀವೂ ಮಾತು ತಪ್ಪದ ಮಗನಾಗಿ. ಮಾತು ತಪ್ಪಿದ ಮಗನಾಡಬೇಡಿ. ಯಡಿಯೂರಪ್ಪನವರೇ ನಾಲಿಗೆ ಮೇಲೆ ನಿಂತ ನಾಯಕನಾಗಿ. ನಾಲಿಗೆ ಕಳೆದುಕೊಂಡ ನಾಯಕನಾಗಬೇಡಿ ಎಂದು ಹೇಳಿದರು.