Thursday, September 24, 2026

BDA Apartments

Home Front Page ಮೈಸೂರು ಜಿಲ್ಲೆಯಲ್ಲಿ ಸೆ.28ರ ಕರ್ನಾಟಕ ಬಂದ್ ಗೆ ಸಂಪೂರ್ಣ ಬೆಂಬಲ ನೀಡಿ-ಸಾಮಾಜಿಕ ಹೋರಾಟಗಾರ ಪ.ಮಲ್ಲೇಶ್ ಮನವಿ

ಮೈಸೂರು ಜಿಲ್ಲೆಯಲ್ಲಿ ಸೆ.28ರ ಕರ್ನಾಟಕ ಬಂದ್ ಗೆ ಸಂಪೂರ್ಣ ಬೆಂಬಲ ನೀಡಿ-ಸಾಮಾಜಿಕ ಹೋರಾಟಗಾರ ಪ.ಮಲ್ಲೇಶ್ ಮನವಿ

ಮೈಸೂರು,ಸೆಪ್ಟೆಂಬರ್,23,2020(www.justkannada.in) : ರೈತ,ಕಾರ್ಮಿಕ ವಿರೋಧಿ ಕಾಯ್ದೆಗಳನ್ನು ಹಿಂಪಡೆಯುವಂತೆ ಸರಕಾರವನ್ನು ಒತ್ತಾಯಿಸುವ ನಿಟ್ಟಿನಲ್ಲಿ ಸೆ.28ರಂದು ಕೈಗೊಂಡಿರುವ ಕರ್ನಾಟಕ ಬಂದ್ ಗೆ ಎಲ್ಲರೂ ಸಹಕಾರ ನೀಡಬೇಕು ಎಂದು ಸಾಮಾಜಿಕ ಹೋರಾಟಗಾರ ಪ.ಮಲ್ಲೇಶ್ ಮನವಿ ಮಾಡಿದ್ದಾರೆ.jk-logo-justkannada-logoರೈತ ವಿರೋಧಿ ಕಾಯ್ದೆ ವಿರುದ್ದ ಬೆಂಗಳೂರಿನಲ್ಲಿ ರೈತರಿಂದ ಬೃಹತ್ ಪ್ರತಿಭಟನೆ ಹಿನ್ನಲೆ. ಮೈಸೂರಿನಲ್ಲಿ ರೈತ ಮುಖಂಡರಿಂದ ಸುದ್ದಿಗೋಷ್ಠಿ ನಡೆಸಿ ಬಂದ್ ಗೆ ಬೆಂಬಲ ನೀಡುವ ಸಂಬಂಧ ಚರ್ಚಿಸಲಾಯಿತು.

ಈ ಸಂಬಂಧ ಪ.ಮಲ್ಲೇಶ್ ಅವರು ಮಾತನಾಡಿ, ಐಕ್ಯ ಹೋರಾಟ ಸಮಿತಿಯು ರಾಜ್ಯ ಸರ್ಕಾರದ ವಿರುದ್ದ ಶಕ್ತಿ ಪ್ರದರ್ಶನಕ್ಕೆ ಕರೆ ನೀಡಿದೆ. ಇದೇ ತಿಂಗಳ 25ರಂದು ರಾಷ್ಟ್ರೀಯ  ಮತ್ತು ರಾಜ್ಯ ಹೆದ್ದಾರಿ ಗಳನ್ನ ರೈತ ಸಂಘಟನೆಗಳಿಂದ ಬಂದ್ ಮಾಡಲಾಗುತ್ತಿದೆ. ಅಲ್ಲದೆ, ಇದೇ ತಿಂಗಳ 28 ರಂದು ಐಕ್ಯ ಹೋರಾಟ ಸಮಿತಿಯಿಂದ ಕರ್ನಾಟಕ ಬಂದ್ ಕರೆ ನೀಡಲಾಗಿದೆ ಎಂದು ಹೇಳಿದರು.

ಸೆ.28ರಂದು ಸಂಪೂರ್ಣ ಮೈಸೂರು ಜಿಲ್ಲೆ ಸ್ತಬ್ಧವಾಗಬೇಕು

ಕರ್ನಾಟಕ ಬಂದ್ ಗೆ ಮೈಸೂರಿನ ವಿವಿಧ ಸಂಘ ಸಂಸ್ಥೆಗಳು ಬೆಂಬಲ ನೀಡಲಿವೆ. ಸಂಪೂರ್ಣ ಮೈಸೂರು ಜಿಲ್ಲೆ ಸ್ತಬ್ಧವಾಗಬೇಕು. ಈ ಬಂದ್ ನಿಂದ ಸರ್ಕಾರಕ್ಕೆ ಒಂದು ಸಂದೇಶ ರವಾನೆ ಆಗಬೇಕು. ಎಲ್ಲಾ ವಹಿವಾಟು ,ಅಂಗಡಿ,ಮುಂಗಟ್ಟುಗಳು ಬಂದ್ ಆಗಬೇಕು. ಈ ಮೂಲಕ ಸರ್ಕಾರಕ್ಕೆ ಎಚ್ಚರಿಕೆ ನೀಡಿ. ಕಾಯ್ದೆಗಳನ್ನ ಹಿಂಪಡೆಯುವಂತೆ ಮಾಡಬೇಕು ಎಂದು ತಿಳಿಸಿದರು.

key words : Everyone-should-cooperate-Karnataka-Band-Social-Fighter-Pa.Mallesh-appeals