ಫಲಿತಾಂಶ ಏನೇ ಬಂದ್ರೂ ಸರಿ ಕಾಂಗ್ರೆಸ್ ಜತೆಯೇ ಇರ್ತೇವೆ-ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡ ಸ್ಪಷ್ಟನೆ…

ಚಿತ್ತೂರು,ಮೇ,18,2019(www.justkannada.in): ಮೇ 23ರ ಲೋಕಸಭೆ ಚುನಾವಣೆ ಫಲಿತಾಂಶ ಬಳಿಕ ಸಮ್ಮಿಶ್ರ ಸರ್ಕಾರ ಪತನಗೊಳ್ಳಲಿದೆ ಎಂದು ಹೇಳಿಕೆ ನೀಡುತ್ತಿರುವ ಬಿಜೆಪಿಗೆ ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡ  ಟಾಂಗ್ ಕೊಟ್ಟಿದ್ದು ಫಲಿತಾಂಶ ಏನೇ ಬಂದರೂ ಸರಿ ನಾವು ಕಾಂಗ್ರೆಸ್ ಜತೆಯೇ ಇರ್ತೇವೆ ಎಂದು ತಿಳಿಸಿದ್ದಾರೆ.

ಇಂದು ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡರ ಹುಟ್ಟುಹಬ್ಬವಾಗಿದ್ದು, ಈ ಹಿನ್ನೆಲೆ ಕುಟುಂಬ ಸಮೇತ ತಿರುಪತಿ ತಿಮ್ಮಪ್ಪ ಸನ್ನಿಧಿಗೆ ಭೇಟಿ ನೀಡಿ ದರ್ಶನ ಪಡೆದರು. ಗೌಡರು ಪ್ರತಿ ವರ್ಷದ ಹುಟ್ಟುಹಬ್ಬದ ಸಂದರ್ಭದಲ್ಲಿ ತಿರುಪತಿ ತಿಮ್ಮಪ್ಪನ ದರ್ಶನ ಪಡೆಯುತ್ತಾರೆ. ಅದರಂತೆ ಈ ಬಾರಿಯೂ ಕೂಡ ತಿಮ್ಮಪ್ಪನ ದರ್ಶನ ಪಡೆದಿದ್ದಾರೆ.

ಬಳಿಕ ಮಾಧ್ಯಮದ ಜತೆ ಮಾತನಾಡಿದ ಅವರು, ಚುನಾವಣಾ ಫಲಿತಾಂಶದ ಬಳಿಕವೂ ನಾವು ಕಾಂಗ್ರೆಸ್ ನೊಂದಿಗೇ ಇರುತ್ತೇವೆ. ನಾನು ಇದಕ್ಕಿಂತ ಹೆಚ್ಚು ಏನನ್ನೂ ಮಾತನಾಡುವುದಕ್ಕೆ ಬಯಸುವುದಿಲ್ಲ, ಮೇ 23 ರಂದು ಫಲಿತಾಂಶ ಹೊರಬೀಳುತ್ತದೆ. ಆಗ ಇಡೀ ದೇಶಕ್ಕೂ ರಾಜಕೀಯದ ಸ್ಪಷ್ಟ ಚಿತ್ರಣ ಸಿಗುತ್ತದೆ ಎಂದರು.

Keywords: Even after the results, we will be with the Congress-Former Prime Minister HD Deve Gowda

#politicalnews #hddevegowda #congress #jds