ಡಿ.5ರ ಕರ್ನಾಟಕ ಬಂದ್ ಗೆ ಹೋಟೆಲ್ ಮಾಲೀಕರ ಸಂಘದಿಂದ ನೈತಿಕ ಬೆಂಬಲ…

ಬೆಂಗಳೂರು,ಡಿಸೆಂಬರ್,5,2020(www.justkannada.in):  ಮರಾಠ ಅಭಿವೃದ್ದಿ ನಿಗಮ ವಿರೋಧಿಸಿ ಡಿಸೆಂಬರ್ 5 ರಂದು ಕರೆ ನೀಡಲಾಗಿರುವ ಕರ್ನಾಟಕ ಬಂದ್ ಗೆ ರಾಜ್ಯ ಹೋಟೆಲ್ ಮಾಲೀಕರ ಸಂಘ ನೈತಿಕ ಬೆಂಬಲ ಸೂಚಿಸಿದೆ.logo-justkannada-mysore

ಈ ಕುರಿತು ಮಾತನಾಡಿರುವ ಹೋಟೆಲ್ ಮಾಲೀಕರ ಸಂಘದ ಅಧ್ಯಕ್ಷ ಪಿ.ಸಿ ರಾವ್,  ಡಿಸೆಂಬರ್ 5 ರಂದು ಕರೆ  ನೀಡಲಾಗಿರುವ ಕರ್ನಾಟಕ ಬಂದ್ ಗೆ ಹೋಟೆಲ್ ಮಾಲೀಕರ ಸಂಘದಿಂದ ನೈತಿಕ ಬೆಂಬಲ ನೀಡಲಾಗುತ್ತದೆ. ಕೋವಿಡ್ ಸಂಕಷ್ಟದಿಂದ ಈಗಾಗಲೇ ಹೋಟೆಲ್ ಗಳು ನಷ್ಟದಲ್ಲಿವೆ. ಮತ್ತೆ ಬಂದ್ ವೇಳೆ ಹೋಟೆಲ್ ಬಂದ್ ಮಾಡಿದರೇ ಮತ್ತೆ ನಷ್ಟ ಅನುಭವಿಸಬೇಕಾಗುತ್ತದೆ. ಹೀಗಾಗಿ ನೈತಿಕ ಬೆಂಬಲ ಮಾತ್ರ ನೀಡುತ್ತೇವೆ. ಡಿಸೆಂಬರ್ 5 ರಂದು ಹೋಟೆಲ್ ಗಳು ಓಪನ್ ಇರುತ್ತವೆ ಎಂದಿದ್ದಾರೆ.ethical-support-hotel-owners-association-dec-5-karnataka-band

ಮರಾಠ ಅಭಿವೃದ್ಧಿ ನಿಗಮ ರಚನೆ ವಿರೋಧಿಸಿ ವಿವಿಧ ಕನ್ನಡ ಪರ ಸಂಘಟನೆಗಳು ಡಿಸೆಂಬರ್ 5ಕ್ಕೆ ಕರ್ನಾಟಕ ಬಂದ್ ಗೆ ಕರೆ ನೀಡಿವೆ. ಬಂದ್ ಗೆ ಹಲವು ಸಂಘಟನೆಗಳು ಬೆಂಬಲ ಸೂಚಿಸಿವೆ.

Key words: Ethical support – Hotel Owners Association – Dec 5 -Karnataka Band.