ಮೀಸಲಾತಿ ವಿರೋಧಿ ಬಿಜೆಪಿ,ಜೆಡಿಎಸ್ ಪಕ್ಷಗಳಿಗೆ ಮತ ಕೇಳಲು ನೈತಿಕತೆ ಇದೆಯಾ..?  ಮಾಜಿ ಸಿಎಂ ಸಿದ್ಧರಾಮಯ್ಯ ಕಿಡಿ.

ಮೈಸೂರು,ಡಿಸೆಂಬರ್,8,2021(www.justkannada.in): ಬಿಜೆಪಿ,ಜೆಡಿಎಸ್ ಎರಡೂ ಪಕ್ಷಗಳು ಮೀಸಲಾತಿ ವಿರೋಧಿಗಳು. ಸ್ಥಳೀಯ ಸಂಸ್ಥೆಗಳಿಗೆ ಏನು ಕೊಡುಗೆ ನೀಡಿಲ್ಲ. ಇದನ್ನು ಮತದಾರರು ಅರ್ಥ ಮಾಡಿಕೊಳ್ಳಬೇಕು ಎಂದು ಮಾಜಿ ಸಿಎಂ ಸಿದ್ಧರಾಮಯ್ಯ ಹೇಳಿದರು.

ಮೈಸೂರಿನಲ್ಲಿ ಸುದ್ಧಿಗೋಷ್ಠಿ ನಡೆಸಿ ಮಾತನಾಡಿದ ಮಾಜಿ ಸಿಎಂ ಸಿದ್ಧರಾಮಯ್ಯ, ಬಿಜೆಪಿಯವರು ಮೀಸಲಾತಿ ಕೊಟ್ಟವರಲ್ಲ. ಈ ಮಿಸಲಾತಿಗಳನ್ನ ವಿರೋಧಿಸಿದರು ರಾಮಾಜೋಯಿಸ್.ರಾಮಾಜೋಯಿಸ್ ಆಗ ರಾಜ್ಯಸಭಾ ಸದಸ್ಯರಾಗಿದ್ದರು. ಮೀಸಲಾತಿ ವಿರೋಧಿಸಿ ಸುಪ್ರೀಂಕೋರ್ಟ್ ಗೆ ಮೆಟ್ಟಿಲೇರಿದ್ದು. ಮೀಸಲಾತಿಯನ್ನ ವಿರೋಧಿಸಿದ ಬಿಜೆಪಿಯವರಿಗೆ ಮತ ಕೇಳುವ ನೈತಿಕತೆ ಇದ್ಯಾ..?  ಬಿಜೆಪಿ,ಜೆಡಿಎಸ್ ಎರಡೂ ಪಕ್ಷಗಳು ಮೀಸಲಾತಿ ವಿರೋಧಿ. ಸ್ಥಳೀಯ ಸಂಸ್ಥೆಗಳಿಗೆ ಏನು ಕೊಡುಗೆ ನೀಡಿಲ್ಲ ಎಂದು ವಾಗ್ದಾಳಿ ನಡೆಸಿದರು.

ಡಿಸೆಂಬರ್ 10ರಂದು ವಿಧಾನಪರಿಷತ್ ಚುನಾವಣೆ ನಡೆಯಲಿದೆ. ಒಟ್ಟು 20 ಸ್ಥಾನಗಳಿಗೆ ನಾವು ಸ್ಪರ್ಧೆ ‌ಮಾಡಿದ್ದೀವಿ. 5 ದ್ವಿಸದಸ್ಯ ಕ್ಷೇತ್ರಗಳಲ್ಲಿ  ಅಭ್ಯರ್ಥಿಗಳನ್ನ ಹಾಕಿದ್ದೇವೆ. ಪರಿಷತ್ ಚುನಾವಣೆಯಲ್ಲಿ ಸಾಮಾಜಿಕ ನ್ಯಾಯವನ್ನು ಒದಗಿಸಿಟ್ಟಿದ್ದೀವಿ. ಬೇರೆ ಯಾವ ಪಕ್ಷವೂ ಸಾಮಾಜಿಕ ನ್ಯಾಯ ಪಾಲಿಸಿಲ್ಲ. ನಾವು ಹಿಂದುಳಿದವರು, ಮಹಿಳೆಯರು, ಅಲ್ಪ ಸಂಖ್ಯಾತರಿಗೆ, ಪರಿಶಿಷ್ಟ ಜಾತಿ ವರ್ಗದವರಿಗೆ ಟಿಕೆಟ್ ಕೊಟ್ಟಿದ್ದೀವಿ. ಕಾಂಗ್ರೆಸ್ ಪಕ್ಷ ಸಾಮಾಜಿಕ ನ್ಯಾಯಕ್ಕೆ ಬದ್ಧವಾಗಿದೆ. ರಾಜೀವ್ ಗಾಂಧಿ ಪ್ರಧಾನಿಯಾಗಿದ್ದಾಗ. ಪಂಚಾಯತ್ ರಾಜ್ ಗೆ 70ರಷ್ಟು ಮೀಸಲಾತಿ ನೀಡಿದರು. ಅಧ್ಯಕ್ಷರು ಉಪಾಧ್ಯಕ್ಷರ ಚುನಾವಣೆಯಲ್ಲಿ ಪರಿಶಿಷ್ಟ ಜಾತಿ, ವರ್ಗಕ್ಕೆ ಮೀಸಲಾತಿ ನೀಡಿದ್ರು. ಮಹಿಳೆಯರಿಗೆ ಮೀಸಲಾತಿ ನೀಡಿದರು. ಇದು ಕಾಂಗ್ರೆಸ್ ನಿಂದ ಮಾತ್ರ ಸಾಧ್ಯವಾಗಿದೆ. ಇದಲ್ಲ ಜನರು ಅರ್ಥಮಾಡಿಕೊಳ್ಳಬೇಕು ಎಂದು ಸಿದ್ಧರಾಮಯ್ಯ ನುಡಿದರು.

ಸ್ಥಳೀಯ ಸಂಸ್ಥೆಗಳನ್ನು ಬಲಪಡಿಸಲು ಬಿಜೆಪಿ, ಜೆಡಿಎಸ್ ನ ಕೊಡುಗೆಗಳೇನು.?

ಸ್ಥಳೀಯ ಸಂಸ್ಥೆಗಳನ್ನು ಬಲಪಡಿಸಲು ಬಿಜೆಪಿ, ಜೆಡಿಎಸ್ ನ ಕೊಡುಗೆಗಳೇನು.? ಎಂದು ಪ್ರಶ್ನಿಸಿದ ಸಿದ್ಧರಾಮಯ್ಯ, ಬಿಜೆಪಿ, ಜೆಡಿಎಸ್ ಸಾಮಾಜಿಕ ನ್ಯಾಯದ ವಿರೋಧಿಗಳು. ಪ್ರತಿ ಐದು ವರ್ಷಕ್ಕೊಮ್ಮೆ ಸ್ಥಳೀಯ ಸಂಸ್ಥೆಗಳಿಗೆ ಚುನಾವಣೆ ನಡೆಸಬೇಕು. ಆದರೆ ರಾಜ್ಯ ಸರ್ಕಾರ ಜಿಲ್ಲಾ ಪಂಚಾಯತ್ ತಾಲ್ಲೂಕು ಪಂಚಾಯತ್ ಚುನಾವಣೆಗಳನ್ನು ಕುಂಟು ನೆಪ ಹೇಳಿಕೊಂಡು ಮುಂದೂಡಿದೆ. ಬಿಜೆಪಿಗೆ ಸೋಲಿನ ಭೀತಿಯಿರುವುದರಿಂದ ಚುನಾವಣೆ ಮುಂದೂಡಲಾಗಿದೆ. ಪರಿಣಾಮ ಈ ಬಾರಿಯ ವಿಧಾನ ಪರಿಷತ್ ಚುನಾವಣೆಯಲ್ಲಿ ಜಿಲ್ಲಾ ಪಂಚಾಯತ್ ಹಾಗೂ ತಾಲ್ಲೂಕು ಪಂಚಾಯತ್ ಸದಸ್ಯರು ಮತ ಚಲಾಯಿಸುವುದರಿಂದ ವಂಚಿತರಾಗಿದ್ದಾರೆ. ಹಿಂದೆಂದೂ ಈ ರೀತಿ ಆಗಿರಲಿಲ್ಲ ಎಂದರು.

ಬಿಜೆಪಿ ಕಾಲದಲ್ಲಿ ಅದಾನಿ ಏಷ್ಯಾದಲ್ಲೇ ನಂಬನ್ ಒನ್ ಶ್ರೀಮಂತ ಆಗಿದ್ದಾನೆ.

ಬಿಜೆಪಿ ಕಾಲದಲ್ಲಿ ಅದಾನಿ ಏಷ್ಯಾದಲ್ಲೇ ನಂಬನ್ ಒನ್ ಶ್ರೀಮಂತ ಆಗಿದ್ದಾನೆ. ಬಡ ಬೋರೇಗೌಡ ಶ್ರೀಮಂತ ಆಗಿದ್ದಾನಾ.? ಕಳೆದ ಮೂರುವರೆ ವರ್ಷದಲ್ಲಿ ಬಡವರಿಗೆ ಒಂದೇ ಒಂದು ಮನೆ ವಿತರಣೆ ಮಾಡಿಲ್ಲ. ನಾನು ಮುಖ್ಯಮಂತ್ರಿ ಆಗಿದ್ದಾಗ ವರ್ಷಕ್ಕೆ 3 ಲಕ್ಷ ಮನೆಗಳಂತೆ ಐದು ವರ್ಷದಲ್ಲಿ 15 ಲಕ್ಷ ಮನೆ ನೀಡಿದ್ದೇನೆ.ಯಾವುದೇ ಅಭಿವೃದ್ಧಿ ಕಾರ್ಯ ಮಾಡದಿದ್ದರೂ ಅಭಿವೃದ್ಧಿಗೆ ಓಟು ಕೊಡಿ ಕೇಳುತ್ತಿದ್ದಾರೆ. ಇತ್ತೀಚೆಗೆ ಸುರಿದ ಮಳೆಯಿಂದ 6 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬೆಳೆ ಹಾನಿಯಾಗಿದ್ದರೂ ಇದುವರೆಗೂ ಸರ್ವೇ ಮಾಡಿಸಿಲ್ಲ, ಸೂಕ್ತ ಪರಿಹಾರ ಕೊಟ್ಟಿಲ್ಲ‌. ರಾಜ್ಯದಲ್ಲಿ ಭ್ರಷ್ಟಾಚಾರ ಮುಗಿಲು ಮುಟ್ಟಿದೆ. ಈ ವಿಚಾರ ಹೇಳಿದರೆ ಅದಕ್ಕೂ ರಾಜಕೀಯ ಬಣ್ಣ ಕಟ್ಟುತ್ತಾರೆ ಎಂದು ಸಿದ್ಧರಾಮಯ್ಯ ಕಿಡಿಕಾರಿದರು.

Key words: ethical -anti-reservation- BJP – JDS- parties – vote -Former CM -Siddaramaiah

ENGLISH SUMMARY…

JDS and BJP are anti-reservation parties, what rights do they have to ask for votes: Former CM Siddaramaiah
Mysuru, December 8, 2021 (www.justkannada.in): “Both the JDS and BJP are against reservations. They have not contributed anything to the local agencies. The voters should understand this,” opined former Chief Minister Siddaramaiah.
Addressing a press meet held in Mysuru today, he said, “BJP people are not the ones who gave reservation to the backward classes. Rama Jois, who was a Rajya Sabha member then had opposed the reservation system. The upper caste people approached the Supreme Court opposing reservation. What rights do the BJP people have to ask for votes from the people?” he questioned.
“Congress is the only party which is and can provide social justice. We have provided tickets to backward classes, women, minorities, and scheduled caste people. Congress is committed to social justice. When Rajiv Gandhi was the Prime Minister, he had given 70% reservation in Panchayat Raj. He provided reservations for SC, STs in the President and Vice-President elections, women reservations, etc. It is possible only from the Congress party. People should understand it,” he added.
Keywords: Former Chief Minister Siddaramaiah/ MLC election/ BJP-JDS/ anti-reservation