Saturday, August 15, 2026

BDA Apartments

Home Front Page ಈಶ್ವರಪ್ಪಗೆ ಪ್ರತ್ಯೇಕ ಕಾನೂನು ಮಾಡಲು ಹೇಳಿ- ಗೃಹ ಸಚಿವ ಡಾ.ಜಿ.ಪರಮೇಶ್ವರ್ ಕಿಡಿ.

ಈಶ್ವರಪ್ಪಗೆ ಪ್ರತ್ಯೇಕ ಕಾನೂನು ಮಾಡಲು ಹೇಳಿ- ಗೃಹ ಸಚಿವ ಡಾ.ಜಿ.ಪರಮೇಶ್ವರ್ ಕಿಡಿ.

ಬೆಂಗಳೂರು, ಫೆಬ್ರವರಿ,9,2024(www.justkannada.in): ‘ದೇಶ ವಿಭಜನೆಯ ಹೇಳಿಕೆ ಕೊಡುವವರನ್ನು ಗುಂಡಿಕ್ಕಿ ಕೊಲ್ಲಬೇಕು’ ಎಂಬ ಹೇಳಿಕೆ ನೀಡಿದ್ದ ಮಾಜಿ ಸಚಿವ ಕೆಎಸ್​.ಈಶ್ವರಪ್ಪ ವಿರುದದ್ಧ ಗೃಹ ಸಚಿವ ಡಾ.ಜಿ.ಪರಮೇಶ್ವರ್ ಕಿಡಿಕಾರಿದ್ದಾರೆ.

ಈ ಕುರಿತು ಮಾತನಾಡಿದ ಗೃಹ ಸಚಿವ ಡಾ.ಜಿ.ಪರಮೇಶ್ವರ್, ಈಶ್ವರಪ್ಪರಿಗೆ ಪ್ರತ್ಯೇಕ ಕಾನೂನು ಮಾಡಲು ಹೇಳಿ, ಈ ಕಾನೂನು ಮೀರಿ ಯಾರು ಕೂಡ ವರ್ತಿಸಬಾರದು ಎಂದು ಹರಿಹಾಯ್ದರು.

ಚಕ್ರವರ್ತಿ ಸೂಲಿಬೆಲೆ ವಿರುದ್ಧ ಎಫ್‌ಐಆರ್ ವಿಚಾರ ಕುರಿತು ಪ್ರತಿಕ್ರಿಯಿಸಿದ ಗೃಹ ಸಚಿವ ಡಾ.ಜಿ.ಪರಮೇಶ್ವರ್,  ಕೋಮುಸೌಹಾರ್ದತೆ ಕದಡುವವರನ್ನು ನೋಡಿ ಸುಮ್ಮನೆ ಕೂರಲ್ಲ. ಅಂತವರ ವಿರುದ್ಧ ಕ್ರಮ ಕೈಗೊಳ್ಳುತ್ತೇವೆ. ಚಕ್ರವರ್ತಿ ಸೂಲಿಬೆಲೆ ಅಷ್ಟೇ ಅಲ್ಲ, ಯಾರೇ ಈ ರೀತಿ ಹೇಳಿಕೆ ಕೊಟ್ಟರೂ ಅಂಥವರ ವಿರುದ್ಧ ನಮ್ಮ ಸರ್ಕಾರ ಕ್ರಮ ಕೈಗೊಳ್ಳುತ್ತದೆ ಎಂದರು.

Key words:  Eshwarappa – separate law – Home Minister -Dr. G. Parameshwar