ಅತ್ತಿಗೆ ಮತ್ತು ಇಬ್ಬರು ಮಕ್ಕಳನ್ನ ಕೊಂದು ಮೈದುನ ಎಸ್ಕೇಪ್.

ಹಾವೇರಿ, ನವೆಂಬರ್,4,2023(www.justkannada.in):  ತನ್ನ ಅಣ್ಣನ ಹೆಂಡತಿ ಅತ್ತಿಗೆ ಮತ್ತು ಅವರ ಇಬ್ಬರು ಮಕ್ಕಳನ್ನು ಕೊಂದು ಮೈದುನ  ಪರಾರಿಯಾದ ಘಟನೆ ಹಾವೇರಿ ಜಿಲ್ಲೆಯಲ್ಲಿ ನಡೆದಿದೆ.

ಹಾನಗಲ್ ತಾಲೂಕಿನ ಯಳ್ಳೂರು ಗ್ರಾಮದಲ್ಲಿ ಈ ಘಟನೆ ನಡೆದಿದೆ. ಗೀತಾ ಮರಿಗೌಡ (32) ಇವರ ಮಕ್ಕಳಾದ ಅಕುಲ್ (10), ಅಂಕಿತಾ (7) ಕೊಲೆಯಾದವರು. ಕುಮಾರಗೌಡ (35) ಎಂಬಾತನೇ ಮೂವರನ್ನು ಕೊಲೆ ಮಾಡಿ ಪರಾರಿಯಾಗಿರುವ ಮೈದುನ.ಕೌಟುಂಬಿಕ ಕಲಹದಿಂದ ಈ ಹತ್ಯೆಯಾಗಿದೆ ಎಂದು ಹೇಳಲಾಗುತ್ತಿದೆ.

ಮೃತ ಗೀತಾಳ  ಗಂಡ ಹೊನ್ನೆಗೌಡ ದುಬೈನಲ್ಲಿ ಕೆಲಸ ಮಾಡುತ್ತಿದ್ದಾರೆ. ಮಾಹಿತಿ ತಿಳಿದು ಸ್ಥಳಕ್ಕೆ ಆಗಮಿಸಿದ ಹಾನಗಲ್ ಠಾಣಾ ಪೊಲೀಸರು ಭೇಟಿನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಾಗಿದೆ.

Key words: escapes- after-killing -sister-in-law – two children.