ಐಆರ್’ಸಿಟಿಸಿ ಪೋರ್ಟಲ್’ನಲ್ಲಿ ದೋಷ: ಟಿಕೆಟ್ ಬುಕ್ಕಿಂಗ್’ಗೆ ಗ್ರಾಹಕರ ಪರದಾಟ

ಬೆಂಗಳೂರು, ಮಾರ್ಚ್ 04, 2023 (www.justkannada.in): ಐಆರ್ ಸಿಟಿಸಿ ಆನ್‌ಲೈನ್ ಸೇವೆಗಳು ಸ್ಥಗಿತಗೊಂಡಿದ್ದು, ಇದರ ಪರಿಣಾಮವಾಗಿ ಸಾರ್ವಜನಿಕರು ಸಮಸ್ಯೆ ಅನುಭವಿಸಬೇಕಾಗಿದೆ.

ಆನ್ ಲೈನ್ ಮೂಲಕ ಟಿಕೆಟ್‌ಗಳನ್ನು ಬುಕ್ ಮಾಡುವವರು ಬುಕ್ಕಿಂಗ್ ವೇಳೆ ಆಗುತ್ತಿರುವ ಸಮಸ್ಯೆಗಳನ್ನು ಸಾಮಾಜಿಕ ಜಾಲತಾಣಗಳ ಮೂಲಕ ಹಂಚಿಕೊಳ್ಳುತ್ತಿದ್ದಾರೆ.

ತತ್ಕಾಲ್ ಸೇವೆಯ ಮೂಲಕ ತಮ್ಮ ರೈಲು ಟಿಕೆಟ್‌ಗಳನ್ನು ಕಾಯ್ದಿರಿಸಲು ಪ್ರಯತ್ನಿಸುವಾಗ ಹೆಚ್ಚಿನವರು ಐಆರ್ ಸಿಟಿಸಿ ಪೋರ್ಟಲ್‌ನಲ್ಲಿ ದೋಷವನ್ನು ಎದುರಿಸಿದ್ದಾರೆ.

ಹಲವರು ಅನಿರೀಕ್ಷಿತ ದೋಷವನ್ನು ಗಮನಕ್ಕೆ ತರುವ ಮೂಲಕ ಸಾಮಾಜಿಕ ಜಾಲತಾಣಗಳ ಮೂಲಕ ಸಮಸ್ಯೆಯನ್ನು ಹಂಚಿಕೊಂಡಿದ್ದಾರೆ.