“ಗ್ರಂಥಾಲಯವನ್ನು ಬಳಕೆದಾರರ ಸ್ನೇಹಿಯಾಗಿಸಲು ಇ-ಸಂಪನ್ಮೂಲ ಮಾಹಿತಿ ಸಹಕಾರಿ” : ಕುಲಪತಿ ಪ್ರೊ.ಜಿ.ಹೇಮಂತ್ ಕುಮಾರ್

ಮೈಸೂರು,ಫೆಬ್ರವರಿ,06,2021(www.justkannada.in) : ಮೈಸೂರು ವಿಶ್ವವಿದ್ಯಾನಿಲಯ ಗ್ರಂಥಾಲಯಕ್ಕೆ ಸಂಬಂಧಿಸಿದಂತೆ ಅಧಿಕೃತ ವೆಬ್ ಸೈಟ್ ಹೊಂದಿದ್ದು, ಹೊಸದಾಗಿ ಇ-ಸಂಪನ್ಮೂಲಗಳ ಮಾಹಿತಿಗಳನ್ನು ಅಪ್ ಲೋಡ್ ಮಾಡಲು ಗ್ರಂಥಾಲಯವು ಮುಂದಾಗಿದೆ ಎಂದು ಮೈಸೂರು ವಿವಿ ಕುಲಪತಿ ಪ್ರೊ.ಜಿ.ಹೇಮಂತ್ ಕುಮಾರ್ ಹೇಳಿದರು.jk

ಗ್ರಂಥಾಲಯದ ಮಾನಸಮೀಡಿಯಾ ಸಭಾಂಗಣದಲ್ಲಿ ಅಧಿಕೃತ ವೆಬ್ ಸೈಟ್ ನ ಹೊಸದಾದ ಇ-ಸಂಪನ್ಮೂಲಗಳ ಮಾಹಿತಿಗಳ ಅಪ್ ಡೇಟ್ ವೆಬ್ ಸೈಟ್ ಗೆ ಚಾಲನೆ ನೀಡಿ ಅವರು ಮಾತನಾಡಿದರು.

ಮೈಸೂರು ವಿವಿ ಗ್ರಂಥಾಲಯಕ್ಕೆ ಸಂಬಂಧಿಸಿದ ಮಾಹಿತಿಗಳನ್ನು ಅಂತರ್ಜಾಲದಲ್ಲಿ ಪ್ರಕಟಿಸುವ ಉದ್ದೇಶದಿಂದ ಗ್ರಂಥಾಲಯವು ತನ್ನದೇ ಅಧಿಕೃತ ವೆಬ್ ಸೈಟ್ ಅನ್ನು ಹೊಂದಿದೆ. ಸದರಿ ವೆಬ್ ಸೈಟ್ ನಲ್ಲಿ ಪುನಃ ಹೊಸದಾದ ಇ-ಸಂಪನ್ಮೂಲಗಳ ಮಾಹಿತಿಗಳನ್ನು ಅಪ್ ಲೋಡ್ ಮಾಡಿ ಪುನರ್ ರಚನೆ ಮಾಡಲಾಗಿದೆ ಎಂದರು.

ವೆಬ್ ಸೈಟ್ ನಲ್ಲಿ  ಎಲ್ಲಾ ಅಧ್ಯಯನ ವಿಭಾಗದ ವಿದ್ಯಾರ್ಥಿಗಳಿಗೆ, ಸಂಶೋಧಕರಿಗೆ ಹಾಗೂ ಓದುಗರಿಗೆ, ಇ-ಸಂಪನ್ಮೂಲಗಳ ಮಾಹಿತಿಯನ್ನು ಗ್ರಂಥಾಲಯವು ಅಂತರ್ಜಾಲದಲ್ಲಿ ಒದಗಿಸಲಿದೆ. ಗ್ರಂಥಾಲಯ ಬಳಕೆದಾರರ ಸ್ನೇಹಿ ಹಾಗೂ ಸರಳವಾಗಿಸುವ ಉದ್ದೇಶದಿಂದ ಗ್ರಂಥಾಲಯ ವೆಬ್ ಪುಟವು ವಿವಿಧ ವಿಭಾಗಗಳಿಂದ ಅಗತ್ಯವಿರುವ ವಿವಿಧ ಮಾಹಿತಿಯನ್ನು ಒದಗಿಸುವ ಕಾರ್ಯಮಾಡಲು ಮುಂದಾಗಿದೆ ಎಂದು ಹೇಳಿದರು.

ವೆಬ್ ಸೈಟ್ ಮೂಲಕ ಸಂಶೋಧನಾ ಗ್ರಂಥಗಳು ಇ-ಪುಸ್ತಕ ರೂಪದಲ್ಲಿ ಓದುಗರಿಗೆ ದೊರೆಯಲಿದೆ. ಅಧ್ಯಾಪಕರು, ಸಂಶೋಧಕರು ಹಾಗೂ ವಿದ್ಯಾರ್ಥಿಗಳಿಗೆ ಪೂರಕವಾದ ಎಲ್ಲಾ ಮಾಹಿತಿ ಕಾಣಬಹುದು. ವಿವಿಯ ಶೈಕ್ಷಣಿಕ ಪ್ರಗತಿ ಮತ್ತು ಸಂಶೋಧನೆಯ ಭಾಗವಾಗಿ ಸಂಶೋಧನಾ ಉತ್ಪಾದನೆಯ ವಿಷಯದ ಮಾಹಿತಿಯು ದೊರಕಲಿದೆ ಎಂದರು.E-resource-information-make-library-more-user-friendly-Chancellor-Prof.G.Hemant Kumarಮೈಸೂರು ವಿವಿ ವ್ಯಾಪ್ತಿಯ ಲಲಿತಕಲಾ ಕಾಲೇಜು, ಮಹಾರಾಜ ಕಾಲೇಜು, ಇಲಾಖೆಯ ಗ್ರಂಥಾಲಯಗಳ ಪುಸ್ತಕಗಳ ಕುರಿತ ಮಾಹಿತಿಯು ದೊರೆಯಲಿದೆ. ಅದಲ್ಲದೇ, ವಿಶೇಷಚೇತನರಿಗೆ ವೆಬ್ ಸೈಟ್ ಹೆಚ್ಚು ಸಹಕಾರಿಯಾಗಿದೆ. ಬ್ರೈಲ್ ಪುಸ್ತಕಗಳು ಮತ್ತು ಆಡಿಯೋ ಪಾಠಗಳ ಗ್ರಂಥ ಸೂಚಿ ವಿವರಗಳು ಲಭ್ಯವಿದೆ ಎಂದು ತಿಳಿಸಿದರು.

ಈ ಸಂದರ್ಭ ಮೈಸೂರು ವಿವಿ ಕುಲಸಚಿವ ಪ್ರೊ.ಆರ್.ಶಿವಪ್ಪ ಸೇರಿದಂತೆ ಗ್ರಂಥಾಲಯದ ಸಿಬ್ಬಂದಿ ಉಪಸ್ಥಿತರಿದ್ದರು.

ENGLISH SUMMARY…

E-Resource information helpful in making library user-friendly: UoM VC
Mysuru, Feb. 06, 2021 (www.justkannada.in): “The University of Mysore Library has its website, and the Library department has initiated steps to upload e-resource information,” opined Prof. G. Hemanth Kumar, Vice-Chancellor, University of Mysore.E-resource-information-make-library-more-user-friendly-Chancellor-Prof.G.Hemant Kumar
He inaugurated the new official updated website comprising E-resources, at a function held at the Manasamedia auditorium of the Library. “E-resource material has been uploaded on the newly revamped library website for the benefit of students doing research and readers. The Library department has taken up the work of providing comprehensive information required for various departments as part of its efforts in making the library website more user-friendly and simple,” he explained. Now the readers can get research books in the form of e-books. All the information required for professors, researchers, and students is made easily accessible, he added.
Keywords: University of Mysore/ Library Department/ updated new website inaugurated

key words : E-resource-information-make-library-more-user-friendly-Chancellor-Prof.G.Hemant Kumar